Dailyhunt Logo
  • Light mode
    Follow system
    Dark mode
    • Play Story
    • App Story
ಭತ್ತದ ಬೆಳೆಗಳಿಗೆ ಡಿ. 20ರವರೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

ಭತ್ತದ ಬೆಳೆಗಳಿಗೆ ಡಿ. 20ರವರೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

ಕಾರಟಗಿ: ಭತ್ತದ ಬೆಳೆಗಳಿಗೆ ಡಿ.20ರವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಬೇಕು, ವಿದ್ಯುತ್‌ ಸಮಯವನ್ನು 6 ರಿಂದ 12 ತಾಸಿಗೆ ವಿಸ್ತರಿಸಬೇಕು. ಹಾನಿಯಾದ ಬೆಳೆಗೆ ₹1 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಯಿತು.

ಪಟ್ಟಣದ ಎಪಿಎಂಸಿ ರೈತ ಸಂಘದ ಕಚೇರಿಯಿಂದ ಕನಕದಾಸ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾಲುವೆ ನೀರು ಅವಲಂಬಿಸಿ ರೈತರು ಬೆಳೆಗಳನ್ನು ಬೆಳೆದಿದ್ದಾರೆ.ಕಾಲುವೆಯಲ್ಲಿ ನೀರು ನಿಲ್ಲಿಸಿದರೆ ರೈತರ ಕೈಗೆ ಬೆಳೆ ಬಾರದೇ ಅಪಾರ ಪ್ರಮಾಣದ ನಷ್ಟ ಸಂಭವಿಸುತ್ತದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಆತ್ಮಹತ್ಯೆಯ ಮಾರ್ಗಕ್ಕಿಳಿಯಬೇಕಾಗುವುದು. ಸರ್ಕಾರಕ್ಕೆ ರೈತರ ಬಗ್ಗೆ ಕಳಕಳಿ ಇದ್ದರೆ ಡಿ. 20ರವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

'ರೈತರ ಬೇಡಿಕೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರೆ ತುಂಗಭದ್ರಾ ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯಾಧ್ಯಕ್ಷ ಬೀರಪ್ಪ ದೇಸ್ನೂರು, ತಾಲ್ಲೂಕಾಧ್ಯಕ್ಷ ನಾರಾಯಣ ಈಡಿಗೇರ, ರೈತ ಸಂಘದ ಪ್ರಮುಖರಾದ ಮರಿಯಪ್ಪ ಸಾಲೋಣಿ, ಮಂಜುನಾಥ ಮಸ್ಕಿ, ಮೌನೇಶ ದಢೇಸೂಗೂರು, ಉಮೇಶ ಭಂಗಿ, ಖಾಜಾಹುಸೇನ್ ಮುಲ್ಲಾ, ಹನುಮಂತಪ್ಪ ನಾಯಕ, ಪರಸಪ್ಪ ಗುಂಡೇಕಾರ್, ರಾಮಣ್ಣ, ದ್ಯಾವಮ್ಮ, ಭಾಷಪ್ಪ ಬಂಡಿ, ಅಯ್ಯಪ್ಪ ಸುದ್ದಿ, ರಮೇಶ ಬೆಳಗೋಡು, ಹನುಮಂತರೆಡ್ಡಿ, ಕಿಟ್ಟಪ್ಪ ಭಜಂತ್ರಿ, ಬಸಣ್ಣ ತೊಂಡಿಹಾಳ, ಅಂಬಣ್ಣ ಬೇನಾಳ, ವೆಂಕ ಮೂಲಿಮನಿ, ಶಿವಪ್ಪ ಗೋಡ್ಯಾಳ, ಹುಲುಗಪ್ಪ ಸುದ್ದಿ, ರಂಗಪ್ಪ ಉಲ್ಲೂರು, ಬಾವಾಜಿ ಪರಸಣ್ಣ, ಯಮುನಪ್ಪ ತಿದ್ದಿ, ಭೀಮಣ್ಣ ಗಂಗಾವತಿ ಇದ್ದರು.

261103-35-516989594

Dailyhunt
Disclaimer: This content has not been generated, created or edited by Dailyhunt. Publisher: Prajavani