Dailyhunt Logo
  • Light mode
    Follow system
    Dark mode
    • Play Story
    • App Story
ಬಿಡದಿ ಸರ್ಕಾರಿ ಕಾಲೇಜಿನಲ್ಲಿ 'ನುಡಿ ಹಬ್ಬ' ಸಂಭ್ರಮ

ಬಿಡದಿ ಸರ್ಕಾರಿ ಕಾಲೇಜಿನಲ್ಲಿ 'ನುಡಿ ಹಬ್ಬ' ಸಂಭ್ರಮ

ಬಿಡದಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ 71ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 'ನುಡಿ ಹಬ್ಬ-2026' ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್.ಡಿ. ಚನ್ನೇಗೌಡ ಮಾತನಾಡಿ, 'ವ್ಯವಹಾರಕ್ಕಾಗಿ ಜಾಗತಿಕ ಮಟ್ಟದ ಯಾವುದೇ ಭಾಷೆಗಳನ್ನು ಕಲಿತರೂ, ನಮ್ಮ ಮಾತೃಭಾಷೆಯಾದ ಕನ್ನಡವನ್ನು ಸದಾ ಪೂಜಿಸಬೇಕು ಮತ್ತು ಗೌರವಿಸಬೇಕು' ಎಂದರು.

ಐ.ಕ್ಯೂ.ಎ.ಸಿ ಸಂಚಾಲಕ ನಿರಂಜನ್ ಪಟೇಲ್ ಮಾತನಾಡಿ, 'ಹರಿದು ಹಂಚಿಹೋದ ಕನ್ನಡಿಗರ ನಾಡನ್ನು ಭಾಷೆಯ ಆಧಾರದ ಮೇಲೆ ಏಕೀಕರಣಗೊಳಿಸಿದ ಇತಿಹಾಸ ಸ್ಮರಣೀಯ. ಕನ್ನಡಿಗ ಉದ್ಯಮಿಗಳು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು' ಎಂದು ಅಭಿಪ್ರಾಯಪಟ್ಟರು.

ಗಣ್ಯರು ಭುವನೇಶ್ವರಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ರೂಪ ಎಂ.ಪಿ. ಉಪನ್ಯಾಸ ನೀಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್. ಸುಜಾತ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಸಮೂಹ ಗೀತ ಗಾಯನ, ಕನ್ನಡ ಕವಿತೆಗಳ ವಾಚನ ಹಾಗೂ ಭಾವಗೀತೆಗೆ ನೃತ್ಯರೂಪಕ ನಡೆಸಿ ಕೊಟ್ಟರು. ಕನ್ನಡ ಉಪನ್ಯಾಸಕಿ ದೀಪಿಕಾ ಕಾರ್ಯಕ್ರಮ ನಿರೂಪಣೆ ಮಾಡಿದರು.

261104-14-1768208401

Dailyhunt
Disclaimer: This content has not been generated, created or edited by Dailyhunt. Publisher: Prajavani