Thursday, 29 Jul, 10.26 am ಪ್ರಜಾವಾಣಿ

ಜಿಲ್ಲೆ
ಬೀದರ್: ಅಂಬೇಡ್ಕರ್‌ ಗ್ರಂಥಾಲಯ ಉದ್ಘಾಟನೆ

ಹುಲಸೂರ: ತಾಲ್ಲೂಕಿನ ಗುತ್ತಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ ಚಾರಿಟಬಲ್ ಟ್ಟಸ್ಟ್ ‌ವತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.

ಗ್ರಂಥಾಲಯ ಉದ್ಘಾಟಿಸಿದ ಭಂತೆ ಧಮ್ಮನಾಗ ಗುರುಗಳು ಮಾತನಾಡಿ, 'ಯುವಕರು ಓದಿನ ಕಡೆ ಗಮನ ಹರಿಸಬೇಕು. ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ' ಎಂದರು.

ಪಾಂಡುರಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬೌದ್ಧ ಮಹಾಸಭೆ ತಾಲ್ಲೂಕು ಅಧ್ಯಕ್ಷ ಧರ್ಮೇಂದ್ರ ಭೊಸಲೆ, ಧಮ್ಮದೀಪ ಗಾಯಕವಾಡ, ಹಣಮಂತ ಕುಸೆ, ಬಲಭೀಮ ವನಖೇಡೆ, ರವಿಂದ್ರ ಶೃಂಗಾರೆ, ಮುಖ್ಯಗುರು ಹರಿನಾಥ ಪಾಟೀಲ, ನಾಮದೇವ, ನಾಗೇಶ ಗಾಯಕವಾಡ ಇದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top