Dailyhunt Logo
  • Light mode
    Follow system
    Dark mode
    • Play Story
    • App Story
ಬೀದರ್‌: ಎಸ್‌ಐಆರ್ ಕರ್ತವ್ಯದಲ್ಲಿದ್ದ ಬಿಎಲ್‌ಒ ಹೃದಯಾಘಾತದಿಂದ ಸಾವು

ಬೀದರ್‌: ಎಸ್‌ಐಆರ್ ಕರ್ತವ್ಯದಲ್ಲಿದ್ದ ಬಿಎಲ್‌ಒ ಹೃದಯಾಘಾತದಿಂದ ಸಾವು

ಬೀದರ್‌: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಭಾಲ್ಕಿಯ ಸುನೀಲ್‌ (45) ಮೃತಪಟ್ಟವರು. ಬೀದರ್‌ ತಾಲ್ಲೂಕಿನ ಅಮಲಾಪುರ ಗ್ರಾಮದಲ್ಲಿ ಶಿಕ್ಷಕರಾಗಿದ್ದ ಅವರು, ಗುರುವಾರ (ಜು.2) ಗ್ರಾಮದ ಬೂತ್‌ 33ರಲ್ಲಿ ಎಸ್‌ಐಆರ್‌ ಕೆಲಸದಲ್ಲಿ ನಿರತರಿದ್ದಾಗ ಸುಸ್ತಾಗಿ ಕುಸಿದು ಬಿದ್ದಿದ್ದಾರೆ.

ಬಳಿಕ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ನಗರದ ಬ್ರಿಮ್ಸ್‌ಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗಿದೆ.

ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಸ್ಟಂಟ್‌ ಅಳವಡಿಸಲಾಗಿತ್ತು. ಶುಕ್ರವಾರ (ಜು.3) ಮೃತಪಟ್ಟಿದ್ದು, ಶನಿವಾರ (ಜು.4) ಅಂತ್ಯಕ್ರಿಯೆ ನಡೆದಿದೆ ಎಂದು ಬೀದರ್‌ ತಹಶೀಲ್ದಾರ್‌ ರವೀಂದ್ರ ದಾಮಾ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani