ಬೀದರ್: ನಗರದ ಶಹಾಗಂಜ್ ಹೆಳವ ಗಲ್ಲಿಯಲ್ಲಿರುವ ಶ್ರೀ ವಿವೇಕ ಗಣೇಶ ದೇವಸ್ಥಾನದ ನೂತನ ಕಟ್ಟಡದ ಮೂರ್ತಿಗಳ ಶಂಕುಸ್ಥಾಪನೆ ಹಾಗೂ ಕಳಸಾರೋಹಣ ಮಹೋತ್ಸವ ಜೂ.15 ರಿಂದ 17ರವರೆಗೆ ನಡೆಯಲಿದೆ.
15ರಂದು ಬೆಳಿಗ್ಗೆ 8.16ಕ್ಕೆ ಸರ್ವಿಸ್ ಸ್ಟ್ಯಾಂಡ್ ದೇವಿ ಮಂದಿರದಿಂದ ಗಣೇಶ, ಈಶ್ವರ ಹಾಗೂ ನಾಗರಾಜ ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದೆ.
108 ಕುಂಭ ಕಲಶ ಹೊತ್ತ ಮಹಿಳೆಯರು ಹಾಗೂ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಗಣಪತಿ ಪೂಜೆ, ಪುಣ್ಯವಾಚನ, ಹವನ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ 1.30ಕ್ಕೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಭಜನೆ ಹಾಗೂ ಕೀರ್ತನೆ ನಡೆಯಲಿವೆ.
16ರಂದು ಬೆಳಿಗ್ಗೆ 8ಕ್ಕೆ ಆವಾಹಿತ ದೇವತಾ ಪೂಜೆ, ಜಲಾಧಿವಾಸ, ಹವನ, ಸ್ನಪನ ವಿಧಿ, ಶಯ್ಯಾಧಿವಾಸ, ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 1.30ಕ್ಕೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಭಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.
17ರಂದು ಬೆಳಿಗ್ಗೆ 8 ಗಂಟೆಗೆ ಸಕಲ ದೇವತಾ ಪೂಜೆ, ಮಹಾಪೂರ್ಣಾಹುತಿ, ಗಣೇಶ, ಈಶ್ವರ ಹಾಗೂ ನಾಗ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಬೆಳಿಗ್ಗೆ 10.40ಕ್ಕೆ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ.
ಬಳಿಕ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿತರಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿ, ಹೆಳವ ಗಲ್ಲಿ ನಿವಾಸಿಗಳು ಹಾಗೂ ಸದ್ಭಕ್ತ ಮಂಡಳಿಯವರು ಮನವಿ ಮಾಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-33-225082725

