Dailyhunt Logo
  • Light mode
    Follow system
    Dark mode
    • Play Story
    • App Story
ಬೀದರ್‌ನಲ್ಲಿ 20 ಶಾಲಾ ವಾಹನ ಜಪ್ತಿ, ₹8.04 ಲಕ್ಷ ದಂಡ

ಬೀದರ್‌ನಲ್ಲಿ 20 ಶಾಲಾ ವಾಹನ ಜಪ್ತಿ, ₹8.04 ಲಕ್ಷ ದಂಡ

ಬೀದರ್‌: ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, 20 ಶಾಲಾ ವಾಹನಗಳನ್ನು ಜಪ್ತಿ ಮಾಡಿ, ₹8.04 ಲಕ್ಷ ದಂಡ ವಿಧಿಸಿದ್ದಾರೆ.

ಬೀದರ್ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮುಹಮ್ಮದ್‌ ಜಾಫರ್‌ ಸಾದಿಕ್‌ ಅವರು ಮೋಟಾರು ವಾಹನ ನಿರೀಕ್ಷಕರನ್ನು ಒಳಗೊಂಡ ತಂಡಗಳನ್ನು ರಚಿಸಿದ್ದಾರೆ.

ಜೂನ್‌ 1ರಿಂದ ಶಾಲಾ, ಕಾಲೇಜುಗಳು ಆರಂಭಗೊಂಡಿದ್ದು, ಕಳೆದೊಂದು ವಾರದಿಂದ ಆರ್‌ಟಿಒ ತಂಡಗಳು ಜಿಲ್ಲೆಯ ನಾನಾ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿವೆ.

ವಿಮೆ, ಅನುಮತಿ, ತೆರಿಗೆ ಹಾಗೂ ಫಿಟ್‌ನೆಸ್ ಇಲ್ಲದೆ ರಸ್ತೆಯಲ್ಲಿ ತಿರುಗಾಡುತ್ತಿದ್ದ ಶಾಲಾ ವಾಹನಗಳಿಗೆ ಬಿಸಿ ಮುಟ್ಟಿಸಿವೆ. ಇದೇ ವೇಳೆ ವಿವಿಧ ಶಾಲೆಗಳ ವಾಹನಗಳಿಗೆ ದಾಖಲೆಗಳು ಇಲ್ಲ ಎಂಬುದು ಗೊತ್ತಾಗಿದೆ. ಒಟ್ಟು 117 ಪ್ರಕರಣ ದಾಖಲಿಸಲಾಗಿದೆ. ವಿಮೆ, ಫಿಟ್‌ನೆಸ್‌ ಮಾಡಿಸಿದ ಬಳಿಕವಷ್ಟೇ ವಾಹನಗಳನ್ನು ರಸ್ತೆಗೆ ಬಿಡಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ವಿದ್ಯಾರ್ಥಿಗಳ ಹಿತ ಮುಖ್ಯವಾಗಿರಬೇಕು ಎಂದು ಸಾದಿಕ್‌ ಅವರು ಎಚ್ಚರಿಕೆ ನೀಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-33-27218814

Dailyhunt
Disclaimer: This content has not been generated, created or edited by Dailyhunt. Publisher: Prajavani