ಆದಿತ್ಯಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ ನಟನೆಯ 'ಧುರಂಧರ್-2' ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ₹1,088 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಜಿಯೋ ಸ್ಟುಡಿಯೊಸ್ ಮಾಹಿತಿ ಹಂಚಿಕೊಂಡಿದೆ.ಚಿತ್ರದ ಗಳಿಕೆ ವಿವರ ಇಲ್ಲಿದೆ..
ಭಾರತದಲ್ಲಿ ಕಳೆದ ವಾರಂತ್ಯಕ್ಕೆ ₹466 ಕೋಟಿ ಗಳಿಸಿದ್ದ ಸಿನಿಮಾವು, 5ನೇ ದಿನ ₹64 ಕೋಟಿ, 6 ದಿನ ₹58 ಕೋಟಿ, 7ನೇ ದಿನ ₹49 ಕೋಟಿ, 8ನೇ ದಿನ ₹53 ಕೋಟಿ ಗಳಿಕೆ ಕಂಡಿದೆ.
ಒಟ್ಟಾರೆ ಭಾರತದಲ್ಲಿ ₹814 ಕೋಟಿ ಗಳಿಸಿದೆ.
ಇನ್ನೂ ವಿದೇಶದಲ್ಲಿ ಈ ಸಿನಿಮಾವು ₹274 ಗಳಿಸಿದೆ. ಒಟ್ಟಾರೆಯಾಗಿ ಈ ಚಿತ್ರವು ಬಿಡುಗಡೆಯಾದ 8 ದಿನದಲ್ಲಿ ₹1,088 ಕೋಟಿಗೂಗೂ ಅಧಿಕ ಗಳಿಕೆ ಮಾಡಿದೆ.
ಕೊಲ್ಲಿ ದೇಶಗಳಲ್ಲಿ 'ಧುರಂಧರ್' ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ವಿರೋಧದ ನಡುವೆಯೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಭಾರತ ಮಾತ್ರವಲ್ಲ, ಉತ್ತರ ಅಮೆರಿಕಾ, ಕೆನಡಾ,ಇಂಗ್ಲೆಂಡ್, ಐರ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

