ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ 'ರಾಮಾಯಣ'ದ ಚಿತ್ರದ ಟ್ರೇಲರ್ ಇಂದು (ಜುಲೈ 30) ಬ್ರಾಹ್ಮಿ ಮುಹೂರ್ತದಲ್ಲಿ (4:15ಕ್ಕೆ) ಬಿಡುಗಡೆಯಾಗಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿ ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಬ್ರಾಹ್ಮಿ ಮುಹೂರ್ತದಲ್ಲಿ 'ರಾಮಾಯಣ' ಟ್ರೇಲರ್ ಬಿಡುಗಡೆ: ರಾವಣನಾಗಿ ಅಬ್ಬರಿಸಿದ ಯಶ್
ಒಂದು ಸಾಲಿನಲ್ಲಿರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಿದ್ದು, ಸಿನಿರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಏನು? ಏಕೆ? ಹೇಗೆ?
'ರಾಮಾಯಣ' ಚಿತ್ರದ ಟ್ರೇಲರ್ ಯಾವಾಗ ಮತ್ತು ಎಷ್ಟು ಗಂಟೆಗೆ ಬಿಡುಗಡೆಯಾಗಿದೆ?
ಈ ಚಿತ್ರದ ಟ್ರೇಲರ್ ಜುಲೈ 30ರಂದು ಮುಂಜಾನೆ 4:15ಕ್ಕೆ, ಪವಿತ್ರ ಬ್ರಾಹ್ಮಿ ಮುಹೂರ್ತದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವವರು ಯಾರು?
ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಬ್ರಾಹ್ಮಿ ಮುಹೂರ್ತದಲ್ಲಿಯೇ ಟ್ರೇಲರ್ ಬಿಡುಗಡೆ ಮಾಡಲು ಕಾರಣವೇನು?
ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತವನ್ನು ದೈವಿಕ ಜಾಗೃತಿ ಮತ್ತು ಶುಭಕರ ಸಮಯ ಎಂದು ಪರಿಗಣಿಸಲಾಗುವುದರಿಂದ, ಹೊಸ ಅಧ್ಯಾಯದ ಆರಂಭದ ಸಂಕೇತವಾಗಿ ಈ ಸಮಯವನ್ನು ಆಯ್ಕೆ ಮಾಡಲಾಗಿದೆ.
ಚಿತ್ರದ ಬಜೆಟ್ ಎಷ್ಟು ಮತ್ತು ಇದು ಯಾವಾಗ ಬಿಡುಗಡೆಯಾಗಲಿದೆ?
ಈ ಚಿತ್ರವನ್ನು ಸರಿಸುಮಾರು 4,000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ತೆರೆಕಾಣಲಿದೆ.
ಯಾವೆಲ್ಲಾ ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ?
ಪ್ರಸ್ತುತ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಇಂಗ್ಲಿಷ್, ಜಪಾನೀಸ್ ಮತ್ತು ಮ್ಯಾಂಡರಿನ್ ಭಾಷೆಗಳಿಗೂ ಡಬ್ ಮಾಡಲು ಯೋಜನೆ ರೂಪಿಸಲಾಗಿದೆ.
ಪ್ರಮುಖ ಅಂಕಿಅಂಶಗಳು
ಜುಲೈ 30ಟ್ರೇಲರ್ ಬಿಡುಗಡೆಯಾದ ದಿನಾಂಕ₹4,000 ಕೋಟಿಚಿತ್ರದ ಅಂದಾಜು ಬಜೆಟ್4 ನಿಮಿಷ 10 ಸೆಕೆಂಡುಗಳುಟ್ರೇಲರ್‌ನ ಅವಧಿ2026ಮೊದಲ ಭಾಗದ ಬಿಡುಗಡೆ ವರ್ಷ2027ಎರಡನೇ ಭಾಗದ ಬಿಡುಗಡೆ ವರ್ಷ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
'ಜುಲೈ 30ರ ಮುಂಜಾನೆ ಪವಿತ್ರ ಬ್ರಾಹ್ಮಿ ಮುಹೂರ್ತದಲ್ಲಿ (4:15ಕ್ಕೆ) 'ರಾಮಾಯಣ' ಚಿತ್ರದ ಟ್ರೇಲರ್ ಅನ್ನು ವಿಶ್ವದಾದ್ಯಂತ ಅನಾವರಣಗೊಳಿಸುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡುತ್ತಿದ್ದೇವೆ' ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಸಾಮಾಜಿಕ ಮಾಧ್ಯಮದಲ್ಲಿ ನಿನ್ನೆ(ಬುಧವಾರ) ಪೋಸ್ಟ್ ಮಾಡಿದ್ದರು.
ಬ್ರಾಹ್ಮಿ ಮುಹೂರ್ತದಲ್ಲಿಯೇ ಟ್ರೇಲರ್ ಬಿಡುಗಡೆ
ಇಂದು ಬ್ರಾಹ್ಮಿ ಮುಹೂರ್ತದಲ್ಲಿ ʻThe Ramayana Trailer. This is where the EPIC BEGINSʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಬಿಡುಗಡೆಯಾದ ಟ್ರೇಲರ್ ಸಾಮಾಜಿಕ ಮಾಧ್ಯಮಗಳಲ್ಲಿ ಧೂಳೆಬ್ಬಿಸಿದೆ.
ಸದ್ಯ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಸುಮಾರು 4 ನಿಮಿಷ 10 ಸೆಕೆಂಡುಗಳ ಅವಧಿಯ ಈ ಟ್ರೇಲರ್‌ನಲ್ಲಿ ಧರ್ಮ ಮತ್ತು ಅಧರ್ಮದ ನಡುವಿನ ಮಹಾಯುದ್ಧವನ್ನ ಅದ್ಭುತ ದೃಶ್ಯ ವೈಭವದೊಂದಿಗೆ ಕಟ್ಟಿಕೊಡಲಾಗಿದೆ.
ಬ್ರಾಹ್ಮಿ ಮುಹೂರ್ತದಲ್ಲಿಯೇ ಯಾಕೆ?
ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಜನ ಹೆಚ್ಚಾಗಿ ಸಕ್ರಿಯವಾಗಿರುವ ಸಮಯ ನೋಡಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗುತ್ತದೆ. ಆದರೆ ಎಲ್ಲರೂ ಗಾಢ ನಿದ್ದೆಯಲ್ಲಿರುವ ಮುಂಜಾನೆ 4:15ಕ್ಕೆ ಟ್ರೇಲರ್ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು.
ಈ ಸಮಯ ವಿಚಿತ್ರ ಎನಿಸಿದರೂ, ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಸೂರ್ಯೋದಯಕ್ಕೂ ಮುನ್ನ ಸುಮಾರು ಒಂದೂವರೆ ಗಂಟೆಗಳ ಕಾಲ (ಸಾಮಾನ್ಯವಾಗಿ ಮುಂಜಾನೆ 3:30 ರಿಂದ 5:30) ಇರುವ ಈ ಸಮಯವನ್ನು ಧನಾತ್ಮಕ ಮತ್ತು ದೈವಿಕ ಶಕ್ತಿ ಜಾಗೃತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಭ ಕಾರ್ಯಗಳು, ಧ್ಯಾನ ಹಾಗೂ ಪ್ರಾರ್ಥನೆಗೆ ಈ ಸಮಯ ಅತ್ಯಂತ ಸೂಕ್ತ ಎಂಬ ನಂಬಿಕೆಯಿದೆ.
ಬ್ರಾಹ್ಮಿ ಮುಹೂರ್ತ ಎಂದರೆ ಏನು?
ಜ್ಯೋತಿಷಿ ಸಿಲ್ಕಿ ಕುಕ್ರೇಜಾ ಹೇಳುವಂತೆ, ಸೂರ್ಯ ಉದಯಿಸುವ ಮುಂಚಿನ ಒಂದು ಗಂಟೆ 36 ನಿಮಿಷಗಳ ಪ್ರಶಾಂತ ಸಮಯವೇ ಬ್ರಾಹ್ಮಿ ಮುಹೂರ್ತ. ಸಾಮಾನ್ಯವಾಗಿ ಇದು ಋತು ಮತ್ತು ಸ್ಥಳವನ್ನು ಅವಲಂಬಿಸಿ ಬೆಳಿಗ್ಗೆ ಮುಂಜಾನೆ 3:30 ರಿಂದ 5:30ರ ನಡುವೆ ಬರುತ್ತದೆ. ಈ ಸಮಯದಲ್ಲಿ ಪೂಜೆ, ಧ್ಯಾನ, ವ್ಯಾಸಂಗ ಮಾಡುವುದು ಅತ್ಯಂತ ಶುಭ. ಈ ಸಮಯದಲ್ಲಿ ಮಾಡುವ ಕೆಲಸಕ್ಕೆ ದೈವಿಕ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಇಂದಿಗೂ ಅನೇಕ ದೇವಾಲಯಗಳಲ್ಲಿ, ಉದಾಹರಣೆಗೆ ಕೇದಾರನಾಥದಲ್ಲಿ, ಈ ಸಮಯದಲ್ಲಿಯೇ ಪವಿತ್ರ ಮಹಾ ಅಭಿಷೇಕ ಪೂಜೆ ಮಾಡಲಾಗುತ್ತದೆ.
ಬರೋಬ್ಬರಿ ₹4,000 ಕೋಟಿ ಬಜೆಟ್
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವನ್ನು ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ ಸುಮಾರು ₹4,000 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಾಗಿ ನಿರ್ಮಿಸಲಾಗುತ್ತಿದೆ.
ಚಿತ್ರದಲ್ಲಿ ರಣಬೀರ್ ಶ್ರೀರಾಮನಾಗಿ, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಇನ್ನು ರಾವಣನ ಪಾತ್ರದಲ್ಲಿ ಯಶ್ ಹಾಗೂ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ.
ಉಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಮತ್ತು ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ ಮತ್ತು ಮೋಹಿತ್ ರೈನಾ ಕೂಡ ಚಿತ್ರದ ಭಾಗವಾಗಿದ್ದಾರೆ.
ಸೋನಿ ಪಿಕ್ಚರ್ಸ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ 'ರಾಮಾಯಣ: ಭಾಗ-1' 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ತೆರೆಕಾಣಲಿವೆ.
ಇಂಗ್ಲಿಷ್, ಜಪಾನೀಸ್ ಸೇರಿ ಹಲವು ಭಾಷೆಗಳಿಗೆ ಡಬ್
ಈ ಚಿತ್ರವನ್ನು ಇಂಗ್ಲಿಷ್, ಜಪಾನೀಸ್ ಹಾಗೂ ಮ್ಯಾಂಡರಿನ್ (ಚೈನೀಸ್) ಸೇರಿದಂತೆ ಹಲವು ಪ್ರಮುಖ ಅಂತರರಾಷ್ಟ್ರೀಯ ಭಾಷೆಗಳಿಗೆ ಡಬ್ ಮಾಡಿಲು ಚಿತ್ರತಂಡ ಯೋಜಿಸಿದೆ ಎನ್ನಲಾಗಿದೆ.

