Dailyhunt Logo
  • Light mode
    Follow system
    Dark mode
    • Play Story
    • App Story
ಬ್ಯಾಡಗಿ ಬಿಸಲಹಳ್ಳಿ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ, ಅನ್ನಸಂತರ್ಪಣೆ

ಬ್ಯಾಡಗಿ ಬಿಸಲಹಳ್ಳಿ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ, ಅನ್ನಸಂತರ್ಪಣೆ

ಬ್ಯಾಡಗಿ: ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಅಡವಿ ಹನುಮಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ಗೋಪಾಳ ತುಂಬಿಸಿ ಅನ್ನಸಂತರ್ಪಣೆ ನೆರವೇರಿಸಿ ಶನಿವಾರ ಮಳೆಗಾಗಿ ಪ್ರಾರ್ಥಿಸಿದರು.

ವರುಣ ದೇವ ಮುನಿಸಿಕೊಂಡ ಹಿನ್ನೆಲೆಯಲ್ಲಿ ಸಮರ್ಪಕ ಮಳೆ ಬರುವಂತೆ ವಿಶೇಷ ಪೂಜೆ ಸಲ್ಲಿಸಿದರು.

ಬಿತ್ತನೆ ಮಾಡಿದ ಬೆಳೆಗಳು ಬಿಸಿಲಿನ ತಾಪಕ್ಕೆ ಕಮರಿ ಹೋಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಬರದ ಛಾಯೆ ಆವರಿಸುವ ಲಕ್ಷಣಗಳು ಕಾಣುತ್ತಿವೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಲಾದರೂ ಕರುಣೆ ತೋರಿ ಮಳೆ ಸುರಿಸುವಂತೆ ಬೇಡಿಕೊಂಡರು.

ಈ ವೇಳೆ ಸೈನಿಕ ಕರಿಯಪ್ಪ ಬಂಗೇರ, ಮರಡೆಪ್ಪ ಮುಚ್ಚಟ್ಟಿ, ಹೊನ್ನಪ್ಪ ಕೊತ್ನೇರ, ಮಲಕಪ್ಪ ಕಾಕೊಳ, ಬಸವಂತಪ್ಪ ಮುಚ್ಚಟ್ಟಿ, ಕರಿಯಪ್ಪ ಓಲೇಕಾರ, ಬಸಪ್ಪ ಕೊತ್ನೇರ, ರಾಜಪ್ಪ ಪಾಟೀಲ, ಈರಪ್ಪ ಕೆರೂಡಿ, ನಿಂಗನಗೌಡ ಪಾಟೀಲ, ಫಕ್ಕಿರಪ್ಪ ಕೊತ್ನೇರ, ಬಿದ್ದಾಡೆಪ್ಪ ಮಾಳಮ್ಮನವರ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-22-1436147235

Dailyhunt
Disclaimer: This content has not been generated, created or edited by Dailyhunt. Publisher: Prajavani