Dailyhunt Logo
  • Light mode
    Follow system
    Dark mode
    • Play Story
    • App Story
ಬ್ಯಾಸ್ಕೆಟ್‌ಬಾಲ್‌: ರಾಜ್ಯ ಬಾಲಕಿಯರಿಗೆ ಬೆಳ್ಳಿ

ಬ್ಯಾಸ್ಕೆಟ್‌ಬಾಲ್‌: ರಾಜ್ಯ ಬಾಲಕಿಯರಿಗೆ ಬೆಳ್ಳಿ

ಬೆಂಗಳೂರು: ಫೈನಲ್‌ ಪಂದ್ಯದ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿದರೂ ದ್ವಿತೀಯಾರ್ಧದಲ್ಲಿ ಎಡವಿದ ಕರ್ನಾಟಕ ಬಾಲಕಿಯರು (16 ವರ್ಷದೊಳಗಿನ) 41ನೇ ರಾಷ್ಟ್ರೀಯ ಯುವ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕದೊಂದಿಗೆ ಅಭಿಯಾನ ಮುಗಿಸಿದರು.

ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ತಮಿಳುನಾಡು ತಂಡವು 85-60 ಅಂತರದಿಂದ ಕರ್ನಾಟಕ ತಂಡವನ್ನು ಮಣಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಕರ್ನಾಟಕ 44-35ರಿಂದ ಮುನ್ನಡೆ ಸಾಧಿಸಿತ್ತು. ಆದರೆ, ಉತ್ತರಾರ್ಧದಲ್ಲಿ ತಮಿಳುನಾಡು ತಂಡವು ಪಾರಮ್ಯ ಮೆರೆಯಿತು.

ತಮಿಳುನಾಡು ಪರ ನಕ್ಷತ್ರಾ 18, ಮಿತ್ರಾ ದೇವಿ 14 ಮತ್ತು ಕಾವ್ಯಾ 13 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕದ ಆಂಚಲ್ ಪಿ. ಸೀರ್ವಿ 22 ಅಂಕ ಕಲೆ ಹಾಕಿದರೆ, ವಿಭಾ ಎಸ್‌.ಎಂ. 12 ಮತ್ತು ಮಹೇಕ್‌ ಶರ್ಮಾ 10 ಅಂಕ ತಂದಿತ್ತರು.

ಬೆಳ್ಳಿ ಪದಕ ಗೆದ್ದ ರಾಜ್ಯ ತಂಡಕ್ಕೆ ಫಿಬಾ ಏಷ್ಯಾ ಅಧ್ಯಕ್ಷ ಮತ್ತು ಕೆಎಸ್‌ಬಿಬಿಎ ಗೌರವ ಕಾರ್ಯದರ್ಶಿ ಕೆ.ಗೋವಿಂದರಾಜ್‌ ಅವರು ₹5 ಲಕ್ಷ ಬಹುಮಾನ ಘೋಷಿಸಿದ್ದಾರೆ.

261104-4-1843243281

Dailyhunt
Disclaimer: This content has not been generated, created or edited by Dailyhunt. Publisher: Prajavani