ಪ್ರಜಾವಾಣಿ

CBSE: ಶಿಕ್ಷಕರ ಮನೆಗೆ 10,12ನೇ ತರಗತಿ ಉತ್ತರ ಪತ್ರಿಕೆಗಳು, ನಾಳೆಯಿಂದ ಮೌಲ್ಯಮಾಪನ

CBSE: ಶಿಕ್ಷಕರ ಮನೆಗೆ 10,12ನೇ ತರಗತಿ ಉತ್ತರ ಪತ್ರಿಕೆಗಳು, ನಾಳೆಯಿಂದ ಮೌಲ್ಯಮಾಪನ
  • 934d
  • 40 shares

ನವದೆಹಲಿ: ಉತ್ತರ ಪತ್ರಿಕೆಗಳ ಮೌಲ್ಯಮಾಪಕ ಪ್ರಕ್ರಿಯೆ ಭಾನುವಾರದಿಂದ ಆರಂಭಿಸಲು ಸಿಬಿಎಸ್‌ಇ ಸಜ್ಜಾಗಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿದ್ದ ಪ್ರಸ್ತಾವನೆಗೆ ಗೃಹ ವ್ಯವಹಾರಗಳ ಸಚಿವಾಲಯ ಸಮ್ಮತಿ ನೀಡಿದೆ.

ನಿಗದಿತ 3,000 ಶಾಲೆಗಳಿಂದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರ ಮನೆಗಳಿಗೆ ತಲುಪಿಸಲಾಗುತ್ತದೆ. ಮನೆಯಲ್ಲಿಯೇ ಮೌಲ್ಯಮಾಪನ ನಡೆಸಲಿದ್ದು, 50 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ಅಂದಾಜಿಸಲಾಗಿದೆ.

10 ಮತ್ತು 12ನೇ ತರಗತಿಯ ಸಿಬಿಎಸ್‌ಇ ಪಠ್ಯಕ್ರಮದ ಹಲವು ಶಾಲೆಗಳಲ್ಲಿ ಪರೀಕ್ಷೆ ಪೂರ್ಣಗೊಂಡಿದೆ. 10ನೇ ತರಗತಿಯ ಸುಮಾರು 18 ಲಕ್ಷ ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಅನುಮತಿ ಮುಂದೂಡಲಾಗಿದೆ.

No Internet connection

Link Copied