Thursday, 04 Mar, 6.15 am ಪ್ರಜಾವಾಣಿ

Coronavirus
ಚಾಮರಾಜನಗರ: ಒಂದೇ ದಿನ 10 ಕೋವಿಡ್‌ ಪ್ರಕರಣ

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ಏಕಾಏಕಿ 10 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕೆಲವು ದಿನಗಳಿಂದ ದಿನಕ್ಕೆ ಮೂರು -ನಾಲ್ಕು ಪ್ರಕರಣಗಳು ವರದಿಯಾಗುತ್ತಿದ್ದವು.

10 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರನೆ 26ಕ್ಕೆ ಏರಿದೆ. ಈ ಪೈಕಿ 13 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,966 ತಲುಪಿದೆ. ಬುಧವಾರ ಇಬ್ಬರು ಸೇರಿದಂತೆ ಇದುವರೆಗೆ 6,808 ಮಂದಿ ಗುಣಮುಖರಾಗಿದ್ದಾರೆ. 112 ಮಂದಿ ಕೋವಿಡ್‌ನಿಂದ ಹಾಗೂ 20 ಮಂದಿ ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ.

810 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, 800 ವರದಿಗಳು ನೆಗೆಟಿವ್‌ ಬಂದಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top