ಬೆಂಗಳೂರು: ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ವತಿಯಿಂದ ಒಂದನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಘಟಕವು ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ನಶಾ ಮುಕ್ತ ಕಾರ್ಯಕ್ರಮ ಆಯೋಜಿಸಿತ್ತು.
ಎನ್‌ಸಿಸಿ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಕಮಲ್ ಚಡ್ಡಾ ಉಪಸ್ಥಿತಿಯಲ್ಲಿ ಒಂದನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ ಕಮಾಂಡಿಂಗ್ ಆಫೀಸರ್ ಹಾಗೂ ನೋಡಲ್ ಅಧಿಕಾರಿ ಲೆಫ್ಟಿನಂಟ್ ಕರ್ನಲ್ ವಿಜಯ್ ಫೆಡ್ರಿಕ್ ಅವರು ನಶಾ ಮುಕ್ತ ಭಾರತ ಅಭಿಯಾನದ ವರದಿಯನ್ನು ಮಂಡಿಸಿದರು.
ಅಭಿಯಾನವು ಈವರೆಗೆ 150 ಶಿಕ್ಷಣ ಸಂಸ್ಥೆಗಳನ್ನು ತಲುಪಿದ್ದು, 5,000ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿರುವುದಾಗಿ ತಿಳಿಸಿದರು.
ನಶಾ ಮುಕ್ತ ಅಭಿಯಾನಕ್ಕೆ ಸಂಬಂಧಿಸಿದ ವಿಡಿಯೊ, ಪ್ರಶಸ್ತಿ ವಿಜೇತ ಕಿರುಚಿತ್ರಗಳು, ಪೋಸ್ಟರ್‌ಗಳು ಹಾಗೂ ಘೋಷವಾಕ್ಯಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕೆಡೆಟ್‌ಗಳಿಗೆ ಬಹುಮಾನ ವಿತರಿಸಲಾಯಿತು.
ಕಮಲ್ ಚಡ್ಡಾ ಅವರು ಕೆಡೆಟ್‌ಗಳಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಅವರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಸೈಬರ್ ಡಿಫೆಂಡರ್ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಕೆಡೆಟ್‌ಗಳ ಸಿದ್ಧತೆ ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್ ಸೈಬರ್ ಭದ್ರತಾ ಪ್ರಯೋಗಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಮೂಲಸೌಕರ್ಯ ಕಲ್ಪಿಸುವ ಸಹಭಾಗಿತ್ವಕ್ಕೆ ಸಂಬಂಧಿಸಿದ ಆಸಕ್ತಿ ವ್ಯಕ್ತಪಡಿಸುವಿಕೆ ಪತ್ರವನ್ನು (ಇಒಐ) ವಿನಿಮಯ ಮಾಡಿಕೊಳ್ಳಲಾಯಿತು.
261104-4-742012876
