Dailyhunt Logo
  • Light mode
    Follow system
    Dark mode
    • Play Story
    • App Story
ಚಂದಾಪುರದಲ್ಲಿ ಭಾರಿ ಮಳೆಯಿಂದ ಕೆಸರಿನಲ್ಲಿ ಸಿಲುಕಿದ ಕಾರು

ಚಂದಾಪುರದಲ್ಲಿ ಭಾರಿ ಮಳೆಯಿಂದ ಕೆಸರಿನಲ್ಲಿ ಸಿಲುಕಿದ ಕಾರು

ಚಂದಾಪುರ (ಆನೇಕಲ್): ಇಲ್ಲಿನ ಪುರಸಭೆ ವ್ಯಾಪ್ತಿಯ ವಾರ್ಡ್‌ ನಂಬರ್‌ 20ರ ಹೆಡ್‌ ಮಾಸ್ಟರ್‌ ಬಡಾವಣೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯು ಕೆಸರುಗದ್ದೆಯಾಗಿದ್ದು, ಮಂಗಳವಾರ ಕಾರೊಂದು ರಸ್ತೆ ಗುಂಡಿಯಲ್ಲಿ ಸಿಲುಕಿತು. ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಕಾರನ್ನು ಮೇಲಕ್ಕೆ ಎತ್ತಲಾಯಿತು.

ಮೂರು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಕೆಸರುಗದ್ದೆಯಾಗಿದ್ದು ವಾಹನಗಳು ಸಂಚರಿಸಲು ಯೋಗ್ಯವಿಲ್ಲದ ಪರಿಸ್ಥಿತಿ ಹೆಡ್‌ ಮಾಸ್ಟರ್‌ ಬಡಾವಣೆಯಲ್ಲಿ ನಿರ್ಮಾಣವಾಗಿದೆ. ಬಡಾವಣೆಯಿಂದ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತಿದೆ. ಕೆಲವೆಡೆ ರಸ್ತೆಯೇ ಕೆಸರು ಗದ್ದೆಯಂತಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವವರು ನಿತ್ಯ ನರಕ ಅನುಭವಿಸುವಂತಾಗಿದೆ.

ಮಂಗಳವಾರ ರಸ್ತೆಯಲ್ಲಿನ ಕೆಸರು ಗದ್ದೆಯಲ್ಲಿ ಕಾರಿನ ಚಕ್ರ ಸಿಲುಕಿತು. ಸ್ಥಳೀಯರು ಕಾರನ್ನು ತಳ್ಳಿದರೂ ಮುಂದಕ್ಕೆ ಸಾಗಲಿಲ್ಲ. ನಂತರ ಐದಕ್ಕೂ ಹೆಚ್ಚು ಮಂದಿ ಕಾರನ್ನು ನೂಕಿದ್ದರಿಂದ ಗುಂಡಿಯಿಂದ ಕಾರು ಆಚೆ ಬಂದಿತು.

ರಸ್ತೆಯು ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ದ್ವಿಚಕ್ರ ವಾಹನ ಸವಾರರಂತೂ 2 ಕಿ.ಮೀ ಹೆಚ್ಚಾದರೂ ತೊಂದರೆಯಿಲ್ಲ ಸುತ್ತಿಕೊಂಡು ಮುಖ್ಯ ರಸ್ತೆಗೆ ಬರುತ್ತೇವೆ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಈ ರಸ್ತೆಯ ವಿಷಯ ತಿಳಿಯದೇ ಕಾರುಗಳಲ್ಲಿ ಬರುವವರು ಕೆಸರು ಗದ್ದೆಯಲ್ಲಿ ಸಿಲುಕಿ ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೆಡ್ ಮಾಸ್ಟರ್‌ ಬಡಾವಣೆಯ ನಿವಾಸಿ ಪೀಟರ್‌ ಒತ್ತಾಯಿಸಿದರು.

261104-15-196531533

Dailyhunt
Disclaimer: This content has not been generated, created or edited by Dailyhunt. Publisher: Prajavani