Dailyhunt Logo
  • Light mode
    Follow system
    Dark mode
    • Play Story
    • App Story
ಚರ್ಚೆಗೆ ಸರ್ಕಾರ ಸಿದ್ಧವಿದೆ, ಸದನ ನಡೆಯಲು ಬಿಡಿ: ವಿಪಕ್ಷಗಳಿಗೆ ಅಮಿತ್ ಶಾ

ಚರ್ಚೆಗೆ ಸರ್ಕಾರ ಸಿದ್ಧವಿದೆ, ಸದನ ನಡೆಯಲು ಬಿಡಿ: ವಿಪಕ್ಷಗಳಿಗೆ ಅಮಿತ್ ಶಾ

ವದೆಹಲಿ: ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಎಲ್ಲ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಹೇಳಿದ್ದಾರೆ.

ಸಂಸತ್ತಿನ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಶಾ, ಚರ್ಚೆಗೆ ಉತ್ತರ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.

ಈ ಕುರಿತು ಮಧ್ಯಾಹ್ನ 2ರೊಳಗೆ ಲೋಕಸಭಾ ಸ್ಪೀಕರ್‌ ಅವರಿಗೆ ನೋಟಿಸ್‌ ನೀಡುವಂತೆ ವಿರೋಧ ಪಕ್ಷಗಳನ್ನು ಒತ್ತಾಯಿಸಿದ್ದಾರೆ.

'ವಿದ್ಯಾರ್ಥಿಗಳ ಪ್ರತಿಭಟನೆ ಸೇರಿದಂತೆ ಎಲ್ಲಾ ವಿಷಯಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ನಾವು ಸಿದ್ಧರಿದ್ದೇವೆ. ಸದನ ನಡೆಯಲು ಬಿಡಿ' ಎಂದು ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ.

'ವಿರೋಧ ಪಕ್ಷಗಳು ಇಂದು ಮಧ್ಯಾಹ್ನ 2ರ ಒಳಗೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಲಿಖಿತವಾಗಿ ನೋಟಿಸ್‌ ನೀಡಿದರೆ, ಇಂದು ಮಧ್ಯಾಹ್ನ 3ರಿಂದ ನಾಳೆ ಮಧ್ಯಾಹ್ನ 3ರ ವರೆಗೆ (ಆಗಸ್ 12 - 13) ಚರ್ಚೆ ನಡೆಸಹುದು' ಎಂದು ತಿಳಿಸಿದ್ದಾರೆ.

ಅಮಿತ್‌ ಶಾ ಅವರು ಸದನಕ್ಕೆ ಬರುತ್ತಿಲ್ಲ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿ, 'ಸಂಸತ್ತಿನಲ್ಲಿರುವ ಕಚೇರಿಗೆ ನಿತ್ಯವೂ ಬರುತ್ತಿದ್ದೇನೆ. ಆದರೆ, ಸದನವೇ ನಡೆಯುತ್ತಿಲ್ಲ' ಎಂದು ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani