Dailyhunt Logo
  • Light mode
    Follow system
    Dark mode
    • Play Story
    • App Story
ಚೆನ್ನಾಗಿ ನಿದ್ದೆ ಬರಬೇಕೆಂದರೆ ಈ ಆಹಾರಗಳ ಸೇವನೆ ಒಳ್ಳೆಯದು...

ಚೆನ್ನಾಗಿ ನಿದ್ದೆ ಬರಬೇಕೆಂದರೆ ಈ ಆಹಾರಗಳ ಸೇವನೆ ಒಳ್ಳೆಯದು...

ಇತ್ತೀಚಿನ ದಿನಗಳಲ್ಲಿ ಬಹುತೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳುತ್ತಿದ್ದಾರೆ. ಅಂತಹವರಿಗಾಗಿ ಇಲ್ಲಿವೆ ಸರಳ ಮಾರ್ಗೋಪಾಯಗಳು.

ನಿದ್ರಾಹೀನತೆಗೆ ಕಾರಣಗಳು

ಒತ್ತಡ, ಹೆಚ್ಚಿದ ಆತಂಕ, ರಾತ್ರಿ ಮಲಗುವ ಸಮಯದಲ್ಲಿ ಟಿವಿ, ಮೊಬೈಲ್ ಫೋನ್ ಬಳಕೆ, ರಾತ್ರಿ ವೇಳೆ ಕಾಫಿ, ಚಹಾ, ಮದ್ಯಪಾನ ಸೇವನೆ.

ನಿಯಮಿತ ನಿದ್ದೆ

ಪ್ರತಿದಿನ ರಾತ್ರಿ 7-8 ಗಂಟೆಗಳ ಕಾಲ ನಿದ್ದೆ ಮಾಡುವುದು ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು

ಬಿಸಿ ಹಾಲು ಸೇವನೆ

ರಾತ್ರಿ ಹೊತ್ತು ಬಿಸಿ ಹಾಲು ಕುಡಿದು ಮಲಗುವುದರಿಂದ ಉತ್ತಮ ನಿದ್ದೆಗೆ ಸಹಕಾರಿಯಾಗಲಿದೆ.

ಬಾಳೆ ಹಣ್ಣು ಸೇವನೆ

ಈ ಹಣ್ಣು ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿದೆ. ರಾತ್ರಿ ಊಟದ ಬಳಿಕ ಬಾಳೆ ಹಣ್ಣನ್ನು ಸೇವಿಸುವುದರಿಂದ ನಿದ್ರಾಹೀನತೆಯನ್ನು ನಿಯಂತ್ರಿಸಬಹುದು.

ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್ ಹೂವಿನ ಚಹಾದಲ್ಲಿ ಆಯಂಟಿಆಕ್ಸಿಡೆಂಟ್ ಅಂಶಗಳಿದೆ. ಹೀಗಾಗಿ ಉತ್ತಮ ನಿದ್ದೆಗೆ ನೆರವಾಗಿ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ.

ಚೆರ‍್ರಿ ಹಣ್ಣು

ಚೆರ‍್ರಿ ಹಣ್ಣಿನಲ್ಲಿ ಮೆಲಟೊನಿನ್‌ ಅಂಶ ಇರುವುದರಿಂದ ರಾತ್ರಿ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಉತ್ತಮ ನಿದ್ದೆಗೆ ಸಹಕರಿಸುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani