Dailyhunt
ಚೇತನ್ ಭಗತ್ ಕಾದಂಬರಿಯಂತಿದೆ ನಮ್ಮ ಪ್ರೇಮ ಕಥೆ: ರಣವೀರ್ ಸಿಂಗ್

ಚೇತನ್ ಭಗತ್ ಕಾದಂಬರಿಯಂತಿದೆ ನಮ್ಮ ಪ್ರೇಮ ಕಥೆ: ರಣವೀರ್ ಸಿಂಗ್

ಬೆಂಗಳೂರು: ನಮ್ಮದು ಒಂದು ರೀತಿಯಲ್ಲಿ ಚೇತನ್ ಭಗತ್ ಅವರ 'ಟು ಸ್ಟೇಟ್ಸ್' ಕಾದಂಬರಿಯಂತೆ ಇರುವ ಪ್ರೇಮ ಕಥೆ.. ಹೀಗೆಂದು ಹೇಳಿದ್ದು ಬಾಲಿವುಡ್ ನಟ ರಣವೀರ್ ಸಿಂಗ್!

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ದಿ ಬಿಗ್ ಪಿಕ್ಚರ್' ಕ್ವಿಜ್ ಶೋ ಆರಂಭಕ್ಕೂ ಮುನ್ನ ರಣವೀರ್ ಕುರಿತು ಕಲರ್ಸ್ ಕಿರು ವಿಡಿಯೊ ಒಂದನ್ನು ಪ್ರಕಟಿಸಿದೆ.

ಜತೆಗೆ, ಪ್ರೋಮೊ ವಿಡಿಯೊದಲ್ಲಿ ರಣವೀರ್ ಸಿಂಗ್ ಸ್ವತಃ ಕ್ವಿಜ್‌ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ, ದೀಪಿಕಾ ಪಡುಕೋಣೆ ಜತೆಗಿನ ಫೋಟೊ ಒಂದರ ಕುರಿತು ಹೇಳುವಾಗ ಈ ಸಂಗತಿಯನ್ನು ರಣವೀರ್ ಪ್ರಸ್ತಾಪ ಮಾಡಿದ್ದಾರೆ.

ದೀಪಿಕಾ ಜತೆಗಿರುವ ಫೋಟೊ ಎಲ್ಲಿಯದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ರಣವೀರ್ ಸಿಂಗ್, ಈ ಪ್ರಶ್ನೆಗೆ ನಾನು ಉತ್ತರಿಸಲೇ ಬೇಕಿದೆ. ಇಲ್ಲದಿದ್ದರೆ ನಾನು ಮನೆಗೆ ಹೋದಾಗ ಏಟು ಬೀಳುವುದು ಖಚಿತ.

Dailyhunt
Disclaimer: This content has not been generated, created or edited by Dailyhunt. Publisher: Prajavani