Sunday, 02 Aug, 7.00 am ಪ್ರಜಾವಾಣಿ

ವಾಣಿಜ್ಯ ಸುದ್ದಿ
ಚೇತರಿಸಿಕೊಳ್ಳದ ಮೂಲಸೌಕರ್ಯ ವಲಯ

ನವದೆಹಲಿ : ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆಯಾಗಿದೆ.

ಮೂಲಸೌಕರ್ಯ ಕೈಗಾರಿಕೆಗಳ ಜೂನ್‌ ತಿಂಗಳ ಬೆಳವಣಿಗೆಯು ಶೇ 15ರಷ್ಟು ಇಳಿಕೆಯಾಗಿದೆ. 2019ರ ಜೂನ್‌ನಲ್ಲಿ ಶೇ 1.9ರಷ್ಟು ಪ್ರಗತಿ ಕಂಡಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ರಸಗೊಬ್ಬರ ಹೊರತುಪಡಿಸಿ, ಕಚ್ಚಾತೈಲ, ನೈಸರ್ಗಿಕ ಅನಿಲ, ತೈಲ ಸಂಸ್ಕರಣೆ, ಉಕ್ಕು, ಸಿಮೆಂಟ್‌ ಹಾಗೂ ವಿದ್ಯುತ್‌ ವಲಯಗಳ ಬೆಳವಣಿಗೆ ನಕಾರಾತ್ಮಕ ಮಟ್ಟದಲ್ಲಿದೆ.

2020-21ರ ಏಪ್ರಿಲ್‌-ಜೂನ್‌ ಅವಧಿಗೆ ಮೂಲಸೌಕರ್ಯ ವಲಯದ ಬೆಳವಣಿಗೆ ಶೇ 24.6ರಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 3.4ರಷ್ಟು ಪ್ರಗತಿ ಕಂಡಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top