Dailyhunt Logo
  • Light mode
    Follow system
    Dark mode
    • Play Story
    • App Story
ಚೀನಾದಿಂದ ಯುದ್ಧ ವಿಮಾನ ಖರೀದಿಸಲಿರುವ ಬಾಂಗ್ಲಾದೇಶ: ವರದಿ

ಚೀನಾದಿಂದ ಯುದ್ಧ ವಿಮಾನ ಖರೀದಿಸಲಿರುವ ಬಾಂಗ್ಲಾದೇಶ: ವರದಿ

ಢಾಕಾ: ಚೀನಾದಿಂದ ಜೆ-10ಸಿಇ ಯುದ್ಧ ವಿಮಾನಗಳನ್ನು ಖರೀದಿಸಲು ಬಾಂಗ್ಲಾದೇಶ ಒಲವು ತೋರಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರು ಚೀನಾ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಚೀನಾದಿಂದ 24 ಬಹುಪಯೋಗಿ ಯುದ್ಧ ವಿಮಾನಗಳನ್ನು ಖರೀದಿಸುವ ಸಂಬಂಧ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

ಬಾಂಗ್ಲಾದೇಶ ಹಾಗೂ ಚೀನಾ ನಡುವೆ ರಕ್ಷಣೆ, ಮೂಲಸೌಕರ್ಯ, ವ್ಯಾಪಾರ ಮತ್ತು ಹೂಡಿಕೆ ವಲಯಗಳಲ್ಲಿ ಮತ್ತಷ್ಟು ಸಹಕಾರ ವೃದ್ಧಿಸುವ ನಿರೀಕ್ಷೆ ಇದೆ ಎಂದು 'ಡೈಲಿ ವಾದಾ' ಪತ್ರಿಕೆ ವರದಿ ಮಾಡಿದೆ.

ಈ ವರ್ಷ ಆಗಸ್ಟ್ ತಿಂಗಳಲ್ಲಿ ಯುದ್ಧ ವಿಮಾನ ಖರೀದಿಗೆ ಸಂಬಂಧ ಒಪ್ಪಂದ ನಡೆಯಲಿದೆ. ಬಾಂಗ್ಲಾದೇಶ ಹಾಗೂ ಚೀನಾ ನಡುವಣ ಮಿಲಿಟರಿ ಸಹಕಾರದ ಕುರಿತು ದ್ವಿಪಕ್ಷೀಯ ಚರ್ಚೆ ನಡೆಯುವ ಸಾಧ್ಯತೆ ಇದೆ.

ಪ್ರತಿ ಯುದ್ಧ ವಿಮಾನದ ಮೌಲ್ಯ ಅಂದಾಜು 40 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ ಎಂದು ತಿಳಿದು ಬಂದಿದೆ.

ಒಪ್ಪಂದ ಸಂಬಂಧ ಕಳೆದ ವಾರ ಚೀನಾದ ನಿಯೋಗವೊಂದು ಢಾಕಾಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಅಧಿಕಾರಿಗಳು ಚೀನಾದ ವಿದೇಶಾಂಗ ಹಾಗೂ ರಕ್ಷಣಾ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು.

ಇರಾನ್‌ ಮೇಲಿನ ದಾಳಿ ವೇಳೆ ಅಮೆರಿಕದ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ: ವರದಿಸೌದಿ ಅರೇಬಿಯಾದಲ್ಲಿ ಯುದ್ಧ ವಿಮಾನ, ಸೈನಿಕರನ್ನು ನಿಯೋಜಿಸಿದ ಪಾಕ್‌: ವರದಿ
Dailyhunt
Disclaimer: This content has not been generated, created or edited by Dailyhunt. Publisher: Prajavani