Dailyhunt
ಚಿನ್ನದ ಬೆಲೆ ಕುಸಿತ: 10 ಗ್ರಾಂಗೆ ₹ 1,130ರಷ್ಟು ಇಳಿಕೆ

ಚಿನ್ನದ ಬೆಲೆ ಕುಸಿತ: 10 ಗ್ರಾಂಗೆ ₹ 1,130ರಷ್ಟು ಇಳಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಶುಕ್ರವಾರ ಪ್ರತಿ 10 ಗ್ರಾಂಗೆ ₹ 1,130ರಷ್ಟು ಇಳಿಕೆ ಆಗಿದೆ. 10 ಗ್ರಾಂ ಚಿನ್ನವು ₹ 45,207ರಂತೆ ಮಾರಾಟ ಆಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಇಳಿಕೆಯು ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹೇಳಿದೆ.

ಗುರುವಾರದ ವಹಿವಾಟಿನ ಕೊನೆಯಲ್ಲಿ ಚಿನ್ನದ ಬೆಲೆಯು ₹ 46,337 ಆಗಿತ್ತು.

ಶುಕ್ರವಾರ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹ 708ರಷ್ಟು ಇಳಿಕೆ ಕಂಡಿದೆ. ಕೆ.ಜಿ. ಬೆಳ್ಳಿಯು ₹ 60,183ರಂತೆ ಮಾರಾಟ ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani