Dailyhunt Logo
  • Light mode
    Follow system
    Dark mode
    • Play Story
    • App Story
ಚಿಂತಾಮಣಿಯಲ್ಲಿ ಚೆಂಡು ಹೂವು ಬೆಳೆ ಕ್ಷೇತ್ರೋತ್ಸವ ಆಯೋಜನೆ

ಚಿಂತಾಮಣಿಯಲ್ಲಿ ಚೆಂಡು ಹೂವು ಬೆಳೆ ಕ್ಷೇತ್ರೋತ್ಸವ ಆಯೋಜನೆ

ಚಿಂತಾಮಣಿ: ನಗರದ ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಪಡಸಚೌಡನಹಳ್ಳಿ ಪ್ರಗತಿಪರ ರೈತ ವೀರಭದ್ರೇಗೌಡ ಅವರ ತೋಟದಲ್ಲಿ ಮಂಗಳವಾರ ಚೆಂಡು ಹೂ ಬೆಳೆ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.

ತೋಟಗಾರಿಕಾ ವಿಜ್ಞಾನಿ ಆರ್.ಪ್ರವೀಣ್ ಕುಮಾರ್, 'ಚೆಂಡು ಹೂವಿನ ಸಮಗ್ರ ಬೆಳೆ ನಿರ್ವಹಣೆ, ಅಲ್ಪ, ಮಧ್ಯಮ ಹಾಗೂ ದೀರ್ಘಾವಧಿ ತಳಿಗಳ ಆಯ್ಕೆ, ಸಸಿ ನಾಟಿ, ಸಮತೋಲನ ಪೋಷಕಾಂಶ ನಿರ್ವಹಣೆ, ನೀರಾವರಿ, ಕೀಟ ಮತ್ತು ರೋಗಗಳ ನಿಯಂತ್ರಣದ ಕುರಿತು ರೈತರಿಗೆ ಮಾಹಿತಿ ನೀಡಿದರು.

ಗಿಡದ ತುದಿ ಚಿವುಟುವಿಕೆ ಪದ್ಧತಿಯಿಂದ ಹೆಚ್ಚು ಕವಲು ಬೆಳೆದು ಅಧಿಕ ಗುಣಮಟ್ಟದ ಹೂವಿನ ಇಳುವರಿ ಪಡೆಯಬಹುದು. ಅವಕ್ಕೆ ಹೆಚ್ಚಿನ ಬೇಡಿಕೆ ಹಾಗೂ ದರ ಇರುತ್ತದೆ' ಎಂದು ವಿವರಿಸಿದರು.

ಕೃಷಿ ವಿಸ್ತರಣಾ ವಿಜ್ಞಾನಿ ಕೆ.ಎನ್.ಮನೋಹರ್, 'ಹವಾಮಾನ ವೈಪರೀತ್ಯ ಪರಿಣಾಮ ಮಾರುಕಟ್ಟೆ ಬೇಡಿಕೆ, ಬೆಲೆ ಏರಿಳಿತ ಹಾಗೂ ಮಾರುಕಟ್ಟೆ ಹೊಂದಾಣಿಕೆ ಕುರಿತು ಮಾಹಿತಿ ನೀಡಿ, ಹಬ್ಬ ಹಾಗೂ ವಿಶೇಷ ಸಂದರ್ಭಗಳ ಬೇಡಿಕೆಗೆ ಅನುಗುಣವಾಗಿ ಬೆಳೆ ಯೋಜಿಸುವಂತೆ' ಸಲಹೆ ನೀಡಿದರು.

ರೈತ ವೀರಭದ್ರೇಗೌಡ, 'ಜೈವಿಕ ಗೊಬ್ಬರ ಬಳಕೆ, ಸುಧಾರಿತ ತಳಿ ಆಯ್ಕೆ, ಸಮತೋಲನ ಗೊಬ್ಬರ ನಿರ್ವಹಣೆ, ಹಳದಿ ಅಂಟು ಬಲೆ ಅಳವಡಿಕೆ ಹಾಗೂ ಸಮಗ್ರ ಕೀಟ ನಿರ್ವಹಣಾ ಕ್ರಮಗಳಿಂದ ಉತ್ತಮ ಗುಣಮಟ್ಟದ ಹೂವು ಹಾಗೂ ಅಧಿಕ ಇಳುವರಿ ಪಡೆಯಲು ಸಾಧ್ಯವಾಗಿದೆ' ಎಂದರು.

261104-16-1896905401

Dailyhunt
Disclaimer: This content has not been generated, created or edited by Dailyhunt. Publisher: Prajavani