ಬೀದರ್: ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ವಿವಿಧ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನಿಗಮದ ಜಿಲ್ಲಾ ಸಂಯೋಜಕರು ತಿಳಿಸಿದ್ದಾರೆ.
ಚರ್ಮ ಕುಶಲ ಕರ್ಮಿಗಳಿಗಾಗಿ ನಿಗಮದ ವತಿಯಿಂದ ಜಾರಿಯಲ್ಲಿರುವ ವಿವಿಧ ಯೋಜನೆಗಳಾದ ಕಾರ್ಯ ಸ್ಪೂರ್ತಿ (ಮಹಿಳೆಯರಿಗೆ), ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಕೌಶಲ ಉನ್ನತೀಕರಣ ಯೋಜನೆ, ಚರ್ಮಶಿಲ್ಪ ಯೋಜನೆ, ಚರ್ಮಕಾರರ ವಸತಿ ಯೋಜನೆ, ಚರ್ಮಕಾರರ ಕಿರು ಆರ್ಥಿಕ ನೇರ ಸಾಲ, ಸ್ವಾವಲಂಬಿ ಮತ್ತು ಸಂಚಾರಿ ಮಾರಾಟ ಮಳಿಗೆ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಆನ್‌ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ನ. 28ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಕಚೇರಿ ಎದುರುಗಡೆ, ಕಾರ್ಪೊರೇಷನ್ ಕಾಂಪ್ಲೆಕ್ಸ್ ಹತ್ತಿರವಿರುವ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ಜಿಲ್ಲಾ ಸಂಯೋಜಕರ ಮೊಬೈಲ್ ಸಂಖ್ಯೆ: 7338387273 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
261104-33-688433291

