Dailyhunt Logo
  • Light mode
    Follow system
    Dark mode
    • Play Story
    • App Story
ದಾವಣಗೆರೆಯಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಚೆಸ್ ಕಪ್ ಟೂರ್ನಿ

ದಾವಣಗೆರೆಯಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಚೆಸ್ ಕಪ್ ಟೂರ್ನಿ

ದಾವಣಗೆರೆ: ನಗರದ ಆನಂದ್ ಪಿಯು ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಮಟ್ಟದ 'ರಾಜ್ಯೋತ್ಸವ ಚೆಸ್‌ ಕಪ್ - 2026' ಟೂರ್ನಿ ನಡೆಯಿತು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಆಟಗಾರರು ಉತ್ಸಾಹದಿಂದ ಭಾಗವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕ ಆನಂದ್ ಪೋತಿನಾ, ಕಾಲೇಜಿನ ಪ್ರಾಂಶುಪಾಲ ಅವಿನಾಶ್ ನಾಯಕ ಹಾಗೂ ಉಪಪ್ರಾಂಶುಪಾಲ ಕೇಶವಮೂರ್ತಿ ಹಾಜರಿದ್ದರು.

11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸಾಯಿ ಕಾರ್ತಿಕ್ (ಪ್ರಥಮ), ರಿಸಿಕ್ ಹಾಸನ್ ಓಂಕಾರ್ (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ರಿತುಪ್ರಾಣ ಎ.ಎನ್. (ಪ್ರಥಮ), ಸಾನ್ವಿ ಕೆ. (ದ್ವಿತೀಯ), 13 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಚಂದನ್ ಅಭಿಷೇಕ್ (ಪ್ರಥಮ), ತನುಷ್ ಆರ್. (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ವೈಷ್ಣವಿ (ಪ್ರಥಮ), ನೋಮಿಕ ಆರ್. (ದ್ವಿತೀಯ) ಹಾಗೂ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಿಖಿಲ್ ಎಸ್. (ಪ್ರಥಮ), ದಿವ್ಯ ಪ್ರಸಾದ್ ವಿ. (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಅಮೃತ ಹೊನ್ನಳ್ಳಿ (ಪ್ರಥಮ) ಸ್ಥಾನ ಪಡೆದಿದ್ದಾರೆ.

17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎ.ಬಿ.ಸಂಜಯ್ (ಪ್ರಥಮ), ಪಿ.ಎಂ.ನಕುಲ್‌ (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಶ್ರೇಷ್ಠ ಡಿ.ಎನ್. (ಪ್ರಥಮ), ವಿದ್ಯಾಶ್ರೀ (ದ್ವಿತೀಯ), 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಜ್ವಲ್ (ಪ್ರಥಮ), ವಿಕಾಸ್ ಪಟೇಲ್ (ದ್ವಿತೀಯ), ಬಾಲಕಿಯರ ವಿಭಾಗದಲ್ಲಿ ಸಿಂಧು ಬಿ.ಕೆ. (ಪ್ರಥಮ) ಸ್ಥಾನ ಪಡೆದಿದ್ದಾರೆ.

261104-43-1055429964

Dailyhunt
Disclaimer: This content has not been generated, created or edited by Dailyhunt. Publisher: Prajavani