ಜೆರುಸಲೇಂ: ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರ ಗುಂಪು ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
ಲೆಬನಾನ್‌ನಲ್ಲಿ ನಡೆದ ಭಾರಿ ದಾಳಿಯಲ್ಲಿ 47 ಜನರು ಮತ್ತು ನಾಲ್ವರು ಇಸ್ರೇಲ್ ಸೈನಿಕರು ಮೃತಪಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹಿಜ್ಬುಲ್ಲಾ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ಇಸ್ರೇಲ್ ಹೇಳಿಕೊಂಡಿತ್ತು. ಇದರಿಂದ ಅಮೆರಿಕ ಮತ್ತು ಇರಾನ್ ನಡುವಿನ ಮಧ್ಯಂತರ ಶಾಂತಿ ಒಪ್ಪಂದ ಬುಡಮೇಲು ಆಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿಜ್ಬುಲ್ಲಾದಿಂದ ಬೆದರಿಕೆ ನಿಲ್ಲುವವರೆಗೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ಸೇನೆ ಇರುವುದನ್ನು ಮುಂದು ವರಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈಗಾಗಲೇ ಹೇಳಿದ್ದಾರೆ. ಆದರೆ ಅದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ, ಲೆಬನಾನ್‌ನಿಂದ ಇಸ್ರೇಲ್ ಹಿಂದೆ ಸರಿಯುವವರೆಗೆ ದಾಳಿ ನಿಲ್ಲಿಸು ವುದಿಲ್ಲ ಎಂದೂ ಹೇಳಿದೆ.
ಲೆಬನಾನ್‌ನಲ್ಲಿನ ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮತ್ತು ಅದರ ಸಾರ್ವಭೌಮತ್ವವನ್ನು ಗೌರವಿಸಲು ಅಮೆರಿಕ- ಇರಾನ್ ಶಾಂತಿ ಒಪ್ಪಂದ ಕರೆ ನೀಡುತ್ತದೆ. ಆದರೆ ಇಸ್ರೇಲ್ ಆಗಲಿ, ಹಿಜ್ಬುಲ್ಲಾ ಆಗಲಿ ಒಪ್ಪಂದದಲ್ಲಿ ಭಾಗಿಯಾಗಿಲ್ಲ.

