ಹುಮನಾಬಾದ್: 'ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ' ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಮೋರೆ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅವರು ಮಾತನಾಡಿ, 'ಬಡವರ ಮತ್ತು ದಲಿತರ ಧ್ವನಿಯಾಗಿ ಸಮಾಜದಲ್ಲಿ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು.
ಪದಾಧಿಕಾರಿಗಳು: ಓಂಕಾರ ಪಿ.ಜಂಜೀರ (ತಾಲ್ಲೂಕು ಅಧ್ಯಕ್ಷ), ಕರಣ್ ಮೇಟಿ (ಉಪಾಧ್ಯಕ್ಷ), ರವಿಕಾಂತ ಬಿ.ಮಾಳಗೆ (ಗೌರವಾಧ್ಯಕ್ಷ), ಶ್ರೀಕಾಂತ ಎಸ್.ಮೈನಳಿಕರ್ ಹಾಗೂ ಕಿಶೋರ ಸೂರ್ಯವಂಶಿ (ಪ್ರಧಾನ ಕಾರ್ಯದರ್ಶಿಗಳು), ಧನರಾಜ ಭೋಲಾ (ಸಹ ಕಾರ್ಯದರ್ಶಿ), ಸುರೇಶ್ ಸಿ.ಪಾಂಡೆ (ಖಜಾಂಚಿ), ಶ್ರೀಕಾಂತ ಜಮಗಿಕರ್ (ಸಹ ಖಜಾಂಚಿ), ರಾಹುಲ ಪ. ಬೋತಗಿಕರ್ (ನಗರ ಅಧ್ಯಕ್ಷ) ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಉಪಾಧ್ಯಕ್ಷ ಸಂತೋಷ್, ಸುನೀಲ ಶಿವನಾಯಕ್ ಸೇರಿದಂತೆ ಇತರರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-33-1881089405

