Dailyhunt Logo
  • Light mode
    Follow system
    Dark mode
    • Play Story
    • App Story
ದೆಹಲಿ ಮಾಲಿನ್ಯ: ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯ ಸ್ಥಳಾಂತರ

ದೆಹಲಿ ಮಾಲಿನ್ಯ: ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯ ಸ್ಥಳಾಂತರ

ನವದೆಹಲಿ: ಮಾಲಿನ್ಯ ಮತ್ತು ಕ್ರೀಡಾಂಗಣದ ಹೊರಾಂಗಣದ ನವೀಕರಣದ ಕಾರಣದಿಂದ, ಡಿ.13ರಂದು ನಡೆಯಬೇಕಾಗಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯವನ್ನು ದೆಹಲಿಯಿಂದ ಬೇರೆಡೆಗೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ.

ನವೆಂಬರ್ ಮತ್ತು ಡಿಸೆಂಬರ್ ವೇಳೆ ದೆಹಲಿಯಲ್ಲಿ ಮಾಲಿನ್ಯವು ಗರಿಷ್ಟ ಮಟ್ಟದಲ್ಲಿರುತ್ತದೆ ಮತ್ತು ಅರುಣ್ ಜೇಟ್ಲಿ ಕ್ರೀಡಾಂಗಣದ ಹೊರಾಂಗಣದ ನವೀಕರಣ ನಡೆಯುತ್ತಿರುವ ಕಾರಣ ಏಕದಿನ ಪಂದ್ಯವನ್ನು ಸ್ಥಳಾಂತರ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಲಾಗಿದೆ ಎಂದು ದೆಹಲಿ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಹೇಳಿದೆ.

ಕ್ರೀಡಾಂಗಣದ ನವೀಕರಣ ಕೆಲಸವು ಇನ್ನೂ ಮೂರು ತಿಂಗಳು ತೆಗೆದುಕೊಳ್ಳುತ್ತದೆ. ಹಾಗಾಗಿ ಪಂದ್ಯದ ಆಯೋಜನೆ ಸಾಧ್ಯವಿಲ್ಲ ಎಂದು ಡಿಡಿಸಿಎ ಹೇಳಿದೆ.

ಮೊದಲ ಏಕದಿನ ಪಂದ್ಯಕ್ಕೆ ಬದಲಿ ಕ್ರೀಡಾಂಗಣವನ್ನು ಬಿಸಿಸಿಐ ಇನ್ನೂ ಘೋಷಿಸಿಲ್ಲ.

3 ಏಕದಿನ ಹಾಗೂ 3 ಟಿ-20 ಪಂದ್ಯಗಳ ಸರಣಿಯನ್ನು ಆಡಲು ಡಿಸೆಂಬರ್‌ನಲ್ಲಿ ಶ್ರೀಲಂಕಾ ತಂಡವು ಭಾರತದ ಪ್ರವಾಸ ಕೈಗೊಳ್ಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani