Dailyhunt Logo
  • Light mode
    Follow system
    Dark mode
    • Play Story
    • App Story
ದೇವದಾಸಿ ಪದ್ಧತಿ ತಡೆ: ಕರ್ನಾಟಕದ ಕ್ರಮ ಶ್ಲಾಘಿಸಿದ 'ಸುಪ್ರೀಂ'

ದೇವದಾಸಿ ಪದ್ಧತಿ ತಡೆ: ಕರ್ನಾಟಕದ ಕ್ರಮ ಶ್ಲಾಘಿಸಿದ 'ಸುಪ್ರೀಂ'

ನವದೆಹಲಿ: ದೇವದಾಸಿ ಪದ್ಧತಿಯು ರಾಜ್ಯದಲ್ಲಿ ಚಾಲ್ತಿಯಲ್ಲಿಲ್ಲ ಎಂಬ ಕರ್ನಾಟಕ ಸರ್ಕಾರದ ಜಿಲ್ಲಾ ಮಟ್ಟದ ಪರಿಶೀಲನಾ ವರದಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್‌, ಮಾಜಿ ದೇವದಾಸಿಯರು ಮತ್ತು ಅವರ ಕುಟುಂಬಗಳಿಗೆ ಒದಗಿಸಲಾದ ಆರ್ಥಿಕ ನೆರವು ಹಾಗೂ ಪುನರ್ವಸತಿ ಕ್ರಮಗಳ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕರ್ನಾಟಕ ಹೈಕೋರ್ಟ್‌ 2025ರ ಜೂನ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಶೇಷ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿತು.

ರಾಜ್ಯದ ಪರ ವಕೀಲರಾದ ರಾಜೇಶ್ ಜಿ. ಇನಾಂದಾರ್‌ ಅವರು ಈ ಕುರಿತ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ರಾಜ್ಯದ 15 ಜಿಲ್ಲೆಗಳಲ್ಲಿ ನಡೆಸಲಾದ ಬಹುಹಂತದ ಪರಿಶೀಲನೆಗಳಲ್ಲಿ, ದೇವದಾಸಿ ಪದ್ಧತಿಯು ಈಗ ಚಾಲ್ತಿಯಲ್ಲಿಲ್ಲ ಎಂಬುದು ದೃಢಪಟ್ಟಿರುವುದಾಗಿ ಈ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ತಳಮಟ್ಟದಲ್ಲಿ ಪರಿಶೀಲನೆ ನಡೆಸಿದ ಕರ್ನಾಟಕ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ಶ್ಲಾಘಿಸಿತು.

ಕರ್ನಾಟಕ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ 1982ರಲ್ಲಿ ಅನುಷ್ಠಾನಗೊಂಡ ಬಳಿಕ ಈವರೆಗೆ ಐದು ಜಿಲ್ಲೆಗಳಲ್ಲಿ 33 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 12 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ.

261003-51-422459873

Dailyhunt
Disclaimer: This content has not been generated, created or edited by Dailyhunt. Publisher: Prajavani