ತಿರುವನಂತಪುರ: ಮುಂಬರುವ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡುವ ವೇಳೆ 'ಕ್ಯಾಪ್ಟನ್ ಕೂಲ್' ಎಂ.ಎಸ್.ಧೋನಿ ಅವರಿಂದ ಅನುಭವಗಳನ್ನು ಪಡೆಯುವುದಾಗಿ ಟಿ20 ವಿಶ್ವಕಪ್‌ನಲ್ಲಿ ಟೂರ್ನಿಯ ಆಟಗಾರನಾದ ಸಂಜು ಸ್ಯಾಮ್ಸನ್ ಸೋಮವಾರ ಇಲ್ಲಿ ತಿಳಿಸಿದರು.
ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಸಾಕಷ್ಟು ವರ್ಷ ಕಳೆದಿರುವ ಸಂಜು ಸ್ಯಾಮ್ಸನ್ ಹಾಲಿ ಋತುವಿನಿಂದ ಸಿಎಸ್‌ಕೆ ಪೋಷಾಕು ಧರಿಸಲಿದ್ದಾರೆ.
ರಾಯಲ್ಸ್ ಮತ್ತು ಸೂಪರ್ ಕಿಂಗ್ಸ್ ತಂಡಗಳು ಮಾರ್ಚ್ 30ರಂದು ಗುವಾಹಟಿಯಲ್ಲಿ ಮುಖಾಮುಖಿಯಾಗಲಿವೆ.
'ನಾನು ಮಹೀ ಭಾಯಿ (ಧೋನಿ) ಜೊತೆ ದೂರವಾಣಿಯಲ್ಲಿ ಸಮಾಲೋಚನೆ ನಡೆಸಿದ್ದೇನೆ. ಆದರೆ ಅವರ ಜೊತೆ ತಂಡದ ಭಾಗವಾಗಿ ಆಡುವುದು ಅಪಾರ ಸಂತಸ ನೀಡುತ್ತದೆ. ಇದು ನನಗೆ ದೊರೆತ ಕಲಿಕೆಯ ಅವಕಾಶ ಎಂದೇ ಭಾವಿಸಿದ್ದೇನೆ' ಎಂದು ಸ್ಯಾಮ್ಸನ್ ಸುದ್ದಿಗಾರರಿಗೆ ತಿಳಿಸಿದರು.

