Dailyhunt Logo
  • Light mode
    Follow system
    Dark mode
    • Play Story
    • App Story
ಡಿಆರ್‌ಎಫ್‌ಒ ಉಲ್ಲಾಸ್ ಪ್ರಕಾಶ್ ಮಾದಾರ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

ಡಿಆರ್‌ಎಫ್‌ಒ ಉಲ್ಲಾಸ್ ಪ್ರಕಾಶ್ ಮಾದಾರ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

ಮಡಿಕೇರಿ: ಸೋಮವಾರಪೇಟೆ ವಲಯ ಅರಣ್ಯದ ಮಾದಾಪುರ ಶಾಖಾ ವ್ಯಾಪ್ತಿಯ ಡಿಆರ್‌ಫ್‌ಒ ಉಲ್ಲಾಸ್ ಪ್ರಕಾಶ್ ಮಾದಾರ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಲಂಚ ಪ್ರಕರಣವೊಂದರಲ್ಲಿ ಸಿಲುಕಿದ್ದ ಉಲ್ಲಾಸ್‌ ಪ್ರಕಾಶ್‌ ವಿರುದ್ಧ ತನಿಖೆ ನಡೆಸಿದ್ದ ಲೋಕಾಯುಕ್ತರು ಕಡ್ಡಾಯ ನಿವೃತ್ತಿಗೊಳಿಸುವಂತೆ ಶಿಫಾರಸ್ಸು ಮಾಡಿದ್ದರು.

ಈ ಶಿಫಾರಸ್ಸಿನ ಮೇರೆಗೆ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೀತಾ ಎಂ. ಪಾಟೀಲ ಅವರು ಕಡ್ಡಾಯ ನಿವೃತ್ತಿ ಆದೇಶ ಹೊರಡಿಸಿದ್ದಾರೆ.

ಉಲ್ಲಾಸ್ ಪ್ರಕಾಶ್ ಮಾದಾರ ವಿರಾಜಪೇಟೆ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ತಮ್ಮ ಮನೆಯ ದುರಸ್ತಿಗಾಗಿ ಮರಗಳನ್ನು ಖರೀದಿಸಿ ಮನೆಯ ಮುಂದೆ ಇರಿಸಿದ್ದರು. ಇದನ್ನು ಗಮನಿಸಿದ ಉಲ್ಲಾಸ್ ಪ್ರಕಾಶ್ ಮಾದಾರ ಈ ಕುರಿತು ಪ್ರಕರಣ ದಾಖಲಿಸದಿರಲು ₹20ರಿಂದ ₹30 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇವರ ವಿರುದ್ಧ ಲೋಕಾಯುಕ್ತ ತನಿಖೆ ನಡೆದು, ಲೋಕಾಯುಕ್ತರು ಕಡ್ಡಾಯ ನಿವೃತ್ತಿಗೆ ಶಿಫಾರಸ್ಸು ಮಾಡಿದ್ದರು.

ಅಕ್ರಮ ಮರ ಕಡಿಯಲು ಸಹಕಾರ ನೀಡಿದ ಆರೋಪದ ಮೇರೆಗೆ ಅವರನ್ನು ಈಚೆಗೆ ಅಮಾನತು ಸಹ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-51-1091070885

Dailyhunt
Disclaimer: This content has not been generated, created or edited by Dailyhunt. Publisher: Prajavani