Saturday, 28 Nov, 1.55 pm ಪ್ರಜಾವಾಣಿ

ಜಿಲ್ಲೆ
ಡಿಕೆಶಿ ವಿಡಿಯೊ ಕೊಡಲಿ, ಆ ಬಗ್ಗೆ ತನಿಖೆ ನಡೆಸಲಾಗುವುದು: ಬಸವರಾಜ ಬೊಮ್ಮಾಯಿ

ರಾಯಚೂರು: 'ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಸಂತೋಷ್ ಆತ್ಮಹತ್ಯೆಗೆ ವಿಡಿಯೊ ಕಾರಣ ಎಂದು ಡಿ.ಕೆ. ಶಿವಕುಮಾರ್ ಹೇಳಿರುವಂತೆ, ಆ ವಿಡಿಯೊ ಒದಗಿಸುವ ಕೆಲಸ ಮಾಡಲಿ. ಆ ಬಗ್ಗೆಯೂ ತನಿಖೆ ನಡೆಸಲಾಗುವುದು' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

'ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ‌ ಮಾಹಿತಿ ಬಂದಿದೆ. ಸದಾಶಿವ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ಘಟನೆ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಲಾಗುವುದು' ಎಂದು ತಿಳಿಸಿದರು.

ಆತ್ಮಹತ್ಯೆಗೆ ಯತ್ನಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌ ವಿರುದ್ಧ ಎಫ್‌ಐಆರ್

'ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಮತ್ತು‌ ವ್ಯವಸ್ಥೆಯ ಆಧುನೀಕರಣ ಮಾಡುವ ಮೊದಲ ಚರಣ‌ ಮುಗಿದಿದೆ. ಇನ್ನೂ ಕೆಲವು ಬಾಕಿ ಉಳಿದಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದಲ್ಲಿ ಆಧುನೀಕರಣ ‌ಪ್ರಕ್ರಿಯೆ ಮುಂದುರಿಸಲಾಗುವುದು. ಇದಕ್ಕಾಗಿ ಕೆಕೆಆರ್‌ಡಿಬಿಯಿಂದಲೂ ಈ‌ ಭಾಗದಲ್ಲಿ ಅನುಕೂಲ ಕಲ್ಪಿಸಲು ಅನುದಾನ ಪಡೆಯಲಾಗುವುದು' ಎಂದರು.

ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಕಚೇರಿಯಲ್ಲಿ ಶನಿವಾರ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ವಿಡಿಯೊ ಕಾರಣ: ಡಿ.ಕೆ. ಶಿವಕುಮಾರ್

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆಗೆ ಯತ್ನ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top