Sunday, 24 Jan, 11.55 am ಪ್ರಜಾವಾಣಿ

ಜಿಲ್ಲೆ
ದೊಡ್ಡಬಳ್ಳಾಪುರ ನಗರಸಭೆ ಮೀಸಲಾತಿ ಪಟ್ಟಿ ‍ಪ್ರಕಟ

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ಹೈಕೋರ್ಟ್‌ ಆದೇಶದಂತೆ ಜ.21ರಂದು ರಾಜ್ಯ ಪತ್ರದಲ್ಲಿ ನಗರಸಭೆ ವಾರ್ಡ್‌ಗಳ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ. ಈ ಹಿಂದಿನ ಹಾಗೂ ಕೋರ್ಟ್‌ ಆದೇಶದ ನಂತರ ಒಂದೆರಡು ವಾರ್ಡ್‌ಗಳ ಮೀಸ
ಲಾತಿ ಮಾತ್ರ ಬದಲಾವಣೆಯಾಗಿದೆ.

ನಿಯದಂತೆ ಮೀಸಲಾತಿ ಪಟ್ಟಿ ಮಾಡಿಲ್ಲ ಎನ್ನುವ ಕಾರಣ ಹಾಗೂ ವಾರ್ಡ್ ಗಳ ಗಡಿ ಗುರುತಿಸುವಿಕೆಯಲ್ಲಿನ ಗೊಂದಲದ ಕುರಿತು ನಗರದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಸತತ ಎರಡು ವರ್ಷಗಳ ವಿಚಾರಣೆ ನಂತರ ಈಗಷ್ಟೇ ಹೊಸದಾಗಿ ಮೀಸಲಾತಿ ಕರಡು ಪಟ್ಟಿ ಪ್ರಕಟವಾಗಿದೆ.

ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ. 7 ದಿನಗಳ ಒಳಗಾಗಿ ಕಾರಣ ಒಳಗೊಂಡಂತೆ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ವಾರ್ಡ್‌ಗಳ ಗಡಿ ಗುರುತಿಸುವಿಕೆ ಗೊಂದಲದ ‌ಕುರಿತ ಇದೇ ತಿಂಗಳ 27ರಂದು ನ್ಯಾಯಾಲಯದ ಮುಂದೆ ಪ್ರಕರಣ ವಿಚಾರಣೆಗೆ ಬರಲಿದ್ದು, ಅಂದಿನ ಆದೇಶದ ನಂತರ ನಗರಸಭೆಗೆ ಚುನಾವಣೆ ನಡೆಯುವ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top