ಬೆಂಗಳೂರು: ದುಬೈ ಕನ್ನಡಿಗರ ಕೂಟದ 2026-28ನೇ ಅವಧಿಗೆ ಅಧ್ಯಕ್ಷರಾಗಿ ಬೆಂಗಳೂರಿನ ಎಂ.ಕೆ. ಅರುಣ್‌ಕುಮಾರ್ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಶ್ಚಿಮ ಏಷ್ಯಾದ ಪ್ರಮುಖ ಕನ್ನಡ ಸಂಘಟನೆಗಳಲ್ಲಿ ದುಬೈ ಕನ್ನಡಿಗರ ಕೂಟವು ಪ್ರಮುಖವಾಗಿ ಗುರುತಿಸಿಕೊಂಡಿದ್ದು, ಕನ್ನಡಿಗರ ಕೂಟ, ದುಬೈಯು 2002 ರಿಂದ ಸ್ಥಾಪನೆಗೊಂಡು, ಕಳೆದ ಎರಡು ದಶಕಗಳಿಂದ ನಿರಂತರವಾಗಿ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.
'ಯುದ್ದದ ಪರಿಸ್ಥಿತಿ ನೋಡಿಕೊಂಡು ಏಪ್ರಿಲ್‌ನಲ್ಲಿ ಸಂಗೀತ ಸೌರಭ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನ.7ರಂದು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ' ಎಂದು ಅರುಣ್‌ಕುಮಾರ್ ತಿಳಿಸಿದ್ದಾರೆ.

