ಕೋಲ್ಕತ್ತ (ಪಿಟಿಐ): ಏಷ್ಯಾದ ಅತಿ ಹಳೆಯ ಫುಟ್‌ಬಾಲ್ ಟೂರ್ನಿಯಾದ ಡ್ಯುರಾಂಡ್ ಕಪ್, ಜುಲೈ 25 ರಿಂದ ಆಗಸ್ಟ್ 23ರವರೆಗೆ ನಡೆಯಲಿದ್ದು 24 ತಂಡಗಳು ಭಾಗವಹಿಸಲಿವೆ. ಇವುಗಳಲ್ಲಿ ಏಳು ತಂಡಗಳು ಇದೇ ಮೊದಲ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿಯಲಿವೆ.
ಮೊದಲ ಪಂದ್ಯ ಜುಲೈ 25ರಂದು ಕೋಲ್ಕತ್ತದಲ್ಲಿ ನಡೆಯಲಿದೆ.
ನಂತರ ರಾಂಚಿ, ಇಂಫಾಲ್, ಶಿಲ್ಲಾಂಗ್ ಮತ್ತು ಗುವಾಹಟಿಯಲ್ಲಿ ಕೆಲವು ಪಂದ್ಯಗಳೂ ನಡೆಯಲಿವೆ. ಫೈನಲ್ ಪಂದ್ಯ ಕೋಲ್ಕತ್ತದ ವಿವೇದಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಎಸ್‌ಎಲ್, ಐ-ಲೀಗ್ ಜೊತೆ ಕೆಲವು ವಿದೇಶಿ ತಂಡಗಳೂ ಭಾಗವಹಿಸಲಿವೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-4-962353348

