Dailyhunt Logo
  • Light mode
    Follow system
    Dark mode
    • Play Story
    • App Story
ಎ.ಐ.ನಿಂದ ಐ.ಟಿ. ಕಂಪನಿಗಳಿಗೆ ಧಕ್ಕೆಯಿಲ್ಲ: ನಂದನ್ ನಿಲೇಕಣಿ

ಎ.ಐ.ನಿಂದ ಐ.ಟಿ. ಕಂಪನಿಗಳಿಗೆ ಧಕ್ಕೆಯಿಲ್ಲ: ನಂದನ್ ನಿಲೇಕಣಿ

ವದೆಹಲಿ : ಕೃತಕ ಬುದ್ಧಿಮತ್ತೆಯು (ಎ.ಐ) ಐ.ಟಿ. ಸೇವಾ ಕಂಪನಿಗಳನ್ನು ಇನ್ನಿಲ್ಲದಂತೆ ಮಾಡುವುದಿಲ್ಲ; ಅದರ ಬದಲಿಗೆ ಈ ಹೊಸ ತಂತ್ರಜ್ಞಾನವು ಐ.ಟಿ ಸೇವಾ ಕಂಪನಿಗಳ ಬಲ ಹೆಚ್ಚಿಸುತ್ತದೆ ಎಂದು ಇನ್ಫೊಸಿಸ್‌ ಲಿಮಿಟೆಡ್‌ನ ಅಧ್ಯಕ್ಷ ನಂದನ್ ನಿಲೇಕಣಿ ಪ್ರತಿಪಾದಿಸಿದ್ದಾರೆ.

ಇನ್ಫೊಸಿಸ್‌ ಕಂಪನಿಯು 2030ರ ವೇಳೆಗೆ ಸೃಷ್ಟಿಯಾಗುವ 400 ಬಿಲಿಯನ್ ಡಾಲರ್‌ ಮೊತ್ತದ (₹37.88 ಲಕ್ಷ ಕೋಟಿ) ಎ.ಐ. ಆಧಾರಿತ ಸೇವೆಗಳ ಮಾರುಕಟ್ಟೆಯ ಪ್ರಯೋಜನ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.

ಕಂಪನಿಯ ಷೇರುದಾರರ 45ನೆಯ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಐ.ಟಿ ಉದ್ಯಮದ ಎದುರು ಇರುವ 'ಅಸ್ತಿತ್ವದ ಪ್ರಶ್ನೆ'ಗೆ ಉತ್ತರಿಸುವ ಯತ್ನ ನಡೆಸಿದರು.

'ಜೆನ್‌ಎಐ ಆರಂಭವಾಗಿ ಮೂರು ವರ್ಷಕ್ಕೂ ಹೆಚ್ಚು ಕಾಲ ಸಂದಿದೆ. ಈ ಹೊತ್ತಿನಲ್ಲಿ ಇನ್ಫೊಸಿಸ್‌ ಕಂಪನಿಯು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತವಾಗಿದೆ. ಅಲ್ಲದೆ, ಮುಂದಿನ ಒಂದು ದಶಕದ ಅವಧಿಗೆ ಹೆಚ್ಚು ಸನ್ನದ್ಧವಾಗಿ ನಿಂತಿದೆ. ಅತ್ಯುತ್ತಮವಾದ ಕೋಡಿಂಗ್ ಪರಿಕರಗಳನ್ನು ಬಳಸುತ್ತ, ನಮ್ಮ ಉತ್ಪಾದಕತೆಯನ್ನು ಸುಧಾರಿಸಿಕೊಳ್ಳುತ್ತೇವೆ. ಆದರೆ ಇದೇ ಅವಧಿಯಲ್ಲಿ ತಂತ್ರಾಂಶ ಅಭಿವೃದ್ಧಿಯ ಕೆಲಸಗಳಲ್ಲಿ ನಾವು ಮಾಡಬೇಕಿರುವುದು ಇನ್ನೂ ಹಲವಷ್ಟಿದೆ' ಎಂದು ನಿಲೇಕಣಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani