Dailyhunt Logo
  • Light mode
    Follow system
    Dark mode
    • Play Story
    • App Story
ಈಜಿಪ್ಟ್‌ ಸವಾಲು ಮೆಟ್ಟಿನಿಂತ ಮೆಸ್ಸಿ ಪಡೆ: ಎಂಟರ ಘಟ್ಟಕ್ಕೆ ಅರ್ಜೆಂಟೀನಾ

ಈಜಿಪ್ಟ್‌ ಸವಾಲು ಮೆಟ್ಟಿನಿಂತ ಮೆಸ್ಸಿ ಪಡೆ: ಎಂಟರ ಘಟ್ಟಕ್ಕೆ ಅರ್ಜೆಂಟೀನಾ

ಟ್ಲಾಂಟಾ: ದ್ವಿತೀಯಾರ್ಧ ದಲ್ಲಿ ಪುಟಿದೆದ್ದ ಲಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್‌ ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಈಜಿಪ್ಟ್‌ ತಂಡದ ಸವಾಲನ್ನು ಮೆಟ್ಟಿನಿಂತಿತು. ಹಾಲಿ ಚಾಂಪಿಯನ್‌ ತಂಡವು 3-2 ಗೋಲುಗಳ ಜಯದೊಂದಿಗೆ ಎಂಟರ ಘಟ್ಟಕ್ಕೆ ಮುನ್ನಡೆಯಿತು.

ಅಟ್ಲಾಂಟಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಈಜಿಪ್ಟ್‌ ತಂಡವು 78ನೇ ನಿಮಿಷದವರೆಗೂ ಮುನ್ನಡೆ ಕಾಯ್ದುಕೊಂಡಿತ್ತು. ಯಾಸೆರ್‌ ಇಬ್ರಾಹಿಂ (15ನೇ ನಿ.) 15ನೇ ನಿಮಿಷದಲ್ಲಿ ಗೋಲು ಗಳಿಸಿ, ಈಪಿಪ್ಟ್‌ ಪಡೆಗೆ ಆರಂಭಿಕ ಮುನ್ನಡೆ ಒದಗಿಸಿದರು. 67ನೇ ನಿಮಿಷದಲ್ಲಿ ಸಬ್‌ಸ್ಟಿಟ್ಯೂಟ್‌ ಆಟಗಾರ ಝಿಕೊ ಕಾಲ್ಚಳಕ ತೋರಿ ಮುನ್ನಡೆಯನ್ನು 2-0ಗೆ ಹಿಗ್ಗಿಸಿದರು.

ಪಂದ್ಯವು ಈಜಿಪ್ಟ್‌ ಪರ ವಾಲುತ್ತಿರುವಂತೆ ಭಾಸವಾಗುತ್ತಿದ್ದಾಗ, ಮೆಸ್ಸಿ ಅವರ ಪಾಸ್‌ನಲ್ಲಿ ಕ್ರಿಸ್ಟಿಯನ್‌ ರೊಮೇರೊ (79ನೇ ನಿ) ಅರ್ಜೆಂಟೀನಾ ಪರ ಮೊದಲ ಗೋಲು ಬಾರಿಸಿದರು. ಈ ಸಂಭ್ರಮವನ್ನು ಐದೇ ನಿಮಿಷಗಳಲ್ಲಿ ಮೆಸ್ಸಿ (84ನೇ ನಿ) ಇಮ್ಮಡಿಗೊಳಿಸಿದರು. ನಿಗದಿತ ಅವಧಿಯಲ್ಲಿ ಪಂದ್ಯ 2-2ರಲ್ಲಿ ಸಮಬಲಗೊಂಡಿತ್ತು.

ಇಂಜುರಿ ಅವಧಿಯಲ್ಲಿ ಎಂಝೊ ಫರ್ನಾಂಡೀಸ್‌ (90+2ನೇ ನಿ.) ನಿರ್ಣಾಯಕ ಗೋಲು ಗಳಿಸಿ ಹಾಲಿ ಚಾಂಪಿಯನ್‌ ತಂಡಕ್ಕೆ ಗೆಲುವು ತಂದಿತ್ತರು.

21 ಮೆಸ್ಸಿ ಅವರು ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು (21) ಗಳಿಸಿದ ಆಟಗಾರ ಎನಿಸಿದರು. ಫ್ರಾನ್ಸ್‌ನ ಕೈಲಿಯನ್‌ ಎಂಬಾಪೆ (19 ಗೋಲು) ಎರಡನೇ ಸ್ಥಾನದಲ್ಲಿದ್ದಾರೆ.

9 ಮೆಸ್ಸಿ ಅವರು ಫಿಫಾ ವಿಶ್ವಕಪ್‌ಟೂರ್ನಿಯ ಸತತ 9 ಪಂದ್ಯಗಳಲ್ಲಿ ಗೋಲು ಬಾರಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260708-4-799656846

Dailyhunt
Disclaimer: This content has not been generated, created or edited by Dailyhunt. Publisher: Prajavani