Dailyhunt Logo
  • Light mode
    Follow system
    Dark mode
    • Play Story
    • App Story
ಎಫ್‌ಐಎಚ್ ಪ್ರೊ ಲೀಗ್ ಹಾಕಿ: ಭಾರತ-ಪಾಕ್ ಮುಖಾಮುಖಿ

ಎಫ್‌ಐಎಚ್ ಪ್ರೊ ಲೀಗ್ ಹಾಕಿ: ಭಾರತ-ಪಾಕ್ ಮುಖಾಮುಖಿ

ಲಂಡನ್ : ಒಲಿಂಪಿಕ್ಸ್ ಚಾಂಪಿಯನ್ ನೆದರ್ಲೆಂಡ್ಸ್ ವಿರುದ್ಧ ಅಮೋಘ ಜಯಗಳಿಸಿ ಬಂದಿರುವ ಭಾರತ ಪುರುಷರ ಹಾಕಿ ತಂಡವು ಆತ್ಮವಿ ಶ್ವಾಸದ ಉತ್ತುಂಗದಲ್ಲಿದೆ. ಮಂಗಳವಾರ ಇಲ್ಲಿ ಆರಂಭ ವಾಗಲಿರುವ ಎಫ್‌ಐಎಚ್ ಪ್ರೊ ಲೀಗ್ ಚರಣದಲ್ಲಿ ಬದ್ಧ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು ಎದುರಿಸಲಿದೆ.

2024ರಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಉಭಯ ತಂಡಗಳು ಕೊನೆಯ ಸಲ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತವು 2-1ರಿಂದ ಗೆದ್ದಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಉಭಯ ತಂಡಗಳು 17 ಬಾರಿ ಸೆಣೆಸಿವೆ. ಅದರಲ್ಲಿ 15 ಬಾರಿ ಗೆದ್ದಿರುವ ಭಾರತವು ಎರಡರಲ್ಲಿ ಡ್ರಾ ಮಾಡಿಕೊಂಡಿದೆ.

ಈಚೆಗೆ ರಾಟೆರ್‌ಡ್ಯಾಮ್‌ನಲ್ಲಿ ನಡೆದಿದ್ದ ಪ್ರೊ ಲೀಗ್‌ನಲ್ಲಿ ಭಾರತವು 3-2ರಿಂದ ನೆದರ್ಲೆಂಡ್ಸ್‌ ಎದುರು ಗೆದ್ದಿತ್ತು. ಅಲ್ಲಿ ಇನ್ನೊಂದು ಪಂದ್ಯದಲ್ಲಿ ಭಾರತ ತಂಡವು ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಜರ್ಮನಿಯ ವಿರುದ್ಧ ಜಯಿಸಿತ್ತು. ಉಳಿದ ಇನ್ನೆರಡು ಪಂದ್ಯಗಳಲ್ಲಿ ಭಾರತ ತಂಡವು ನೆದರ್ಲೆಂಡ್ಸ್ ಹಾಗೂ ಜರ್ಮನಿ ವಿರುದ್ಧ ಸೋತಿತ್ತು. ಆದರೆ ಆ ಪಂದ್ಯಗಳಲ್ಲಿ ವಿರೋಚಿತ ಹೋರಾಟ ನಡೆಸಿ ಗಮನ ಸೆಳೆದಿತ್ತು. ಆದರೆ ಭಾರತ ತಂಡವು ನಾಲ್ಕು ಪಂದ್ಯಗಳಲ್ಲಿ ಸೇರಿ 19 ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ಕೇವಲ ಐದು ಗೋಲು ಗಳಿಸಿತ್ತು.

ಅದರಿಂದಾಗಿ ಮುಖ್ಯ ಕೋಚ್ ಕ್ರೇಗ್ ಫುಲ್ಟನ್ ಮತ್ತು ನಾಯಕ ಹರ್ಮ್‌ನ್‌ಪ್ರೀತ್ ಸಿಂಗ್ ಅವರು ಕಟ್ಟುನಿಟ್ಟಿನ ಸೂಚನೆಗಳನ್ನು ತಂಡಕ್ಕೆ ನೀಡಿದ್ದಾರೆ. ಪೆನಾಲ್ಟಿ ಅವಕಾಶಗಳಲ್ಲಿ ಗೋಲು ಗಳಿಸುವತ್ತ ಹೆಚ್ಚು ಗಮನ ನೀಡುವ ಅಭ್ಯಾಸವನ್ನು ತಂಡದ ಆಟಗಾರರು ಮಾಡುತ್ತಿದ್ದಾರೆ.

ಮಂಗಳವಾರ ಪಾಕ್‌ ಎದುರಿನ ಪಂದ್ಯದ ನಂತರ ಗುರುವಾರ ಇಂಗ್ಲೆಂಡ್ ತಂಡದ ವಿರುದ್ಧ ಆಡಲಿದೆ. ಶುಕ್ರವಾರ ಎರಡನೇ ಲೆಗ್‌ನಲ್ಲಿ ಪಾಕ್ ತಂಡವನ್ನು ಮತ್ತೊಮ್ಮೆ ಎದುರಿಸುವರು. ಅಮ್ಮದ್ ಶಕೀಲ್ ಭಟ್ ನಾಯಕತ್ವದ ಪಾಕ್ ತಂಡವು ಉತ್ತಮ ಆರಂಭದ ನಿರೀಕ್ಷೆಯಲ್ಲಿದೆ. ಆದರೆ ಯುರೋಪಿಯನ್ ಲೀಗ್‌ನಲ್ಲಿ ತಂಡವು ಸತತ ವೈಫಲ್ಯ ಅನುಭವಿಸಿ ಇಲ್ಲಿಗೆ ಬಂದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-51-1939402310

Dailyhunt
Disclaimer: This content has not been generated, created or edited by Dailyhunt. Publisher: Prajavani