Dailyhunt Logo
  • Light mode
    Follow system
    Dark mode
    • Play Story
    • App Story
ಏಜೆಂಟರ ಹಾವಳಿ ತಡೆಗೆ ಕ್ರಮ ವಹಿಸಿ ಎಂದು ರಮೇಶ ಮೈಲುಗೋಳ ನಿರ್ದೇಶನ

ಏಜೆಂಟರ ಹಾವಳಿ ತಡೆಗೆ ಕ್ರಮ ವಹಿಸಿ ಎಂದು ರಮೇಶ ಮೈಲುಗೋಳ ನಿರ್ದೇಶನ

ಬೆಳಗಾವಿ: 'ಇಲ್ಲಿನ ಮಹಾನಗರ ಪಾಲಿಕೆ ವಲಯ ಕಚೇರಿಗಳಲ್ಲಿ ಹೆಚ್ಚಿರುವ ಏಜೆಂಟರ ಹಾವಳಿ ತಡೆಗೆ ಕ್ರಮ ವಹಿಸಬೇಕು' ಎಂದು ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಮೈಲುಗೋಳ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಏಜೆಂಟರ ಹಾವಳಿ ಹೆಚ್ಚಿದ ಕುರಿತು, ಸಮಿತಿ ಸದಸ್ಯರು, ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಏಜೆಂಟರ ಸಹಾಯ ಇಲ್ಲದೆಯೇ, ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ' ಎಂದು ನಿರ್ದೇಶನ ನೀಡಿದರು.

ಉಪಮೇಯರ್‌ ಹನುಮಂತ ಕೊಂಗಾಲಿ ಅವರು, ಅಶೋಕ ನಗರದ ಬ್ಯಾಡ್ಮಿಂಟನ್ ಕೋರ್ಟ್ ಕಟ್ಟಡದ ವಾರ್ಷಿಕ ನಿರ್ವಹಣೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಬಾಕಿ ಮೊತ್ತವನ್ನು ಬಡ್ಡಿ ಸಹಿತವಾಗಿ ಭರ್ತಿ ಮಾಡಿಕೊಳ್ಳುವ ಹಾಗೂ ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಚರ್ಚಿಸಿದರು.

ಸಮಿತಿ ಸದಸ್ಯರಾದ ಬ್ರಹ್ಮಾನಂದ ಮಿರಜಕರ, ಶಂಕರ ಪಾಟೀಲ, ರವಿರಾಜ ಸಾಂಬ್ರೇಕರ, ದೀಪಾಲಿ ಟೋಪಗಿ, ಮೋದಿನಸಾಬ್ ಮತವಾಲೆ, ಬಸವರಾಜ ಮೋದಗೆೇಕರ, ಉಪಆಯುಕ್ತ(ಕಂದಾಯ) ಸಿದ್ದು ಹುಲ್ಲೋಳಿ, ಉಪಆಯುಕ್ತ(ಆಡಳಿತ) ಉದಯಕುಮಾರ ತಳವಾರ, ಪರಿಷತ್ ಕಾರ್ಯದರ್ಶಿ ರಮೇಶ ಬಡಿಗೇರ ಇದ್ದರು.

261104-21-411439672

Dailyhunt
Disclaimer: This content has not been generated, created or edited by Dailyhunt. Publisher: Prajavani