Dailyhunt Logo
  • Light mode
    Follow system
    Dark mode
    • Play Story
    • App Story
'ಎಕ್ಸ್‌'ನಿಂದ ಇನ್‌ಸ್ಟಾಗೆ ಬದಲಾದ ರಾಜಕೀಯ: ಮೋದಿಗೆ ಕಾದಿದೆ ಜೆನ್‌-ಝೀ ಸವಾಲು!

'ಎಕ್ಸ್‌'ನಿಂದ ಇನ್‌ಸ್ಟಾಗೆ ಬದಲಾದ ರಾಜಕೀಯ: ಮೋದಿಗೆ ಕಾದಿದೆ ಜೆನ್‌-ಝೀ ಸವಾಲು!

ಕಳೆದೊಂದು ದಶಕದಿಂದಲೂ ಹೆಚ್ಚು ಕಾಲದಿಂದ ದೇಶದ ರಾಜಕಾರಣದಲ್ಲಿ ಅತ್ಯಂತ ಶಕ್ತಿಶಾಲಿ ಹಾಗೂ ಯಾವುದೇ ನಿರ್ಧಾರದಿಂದ ಹಿಂದೆ ಸರಿಯದ ನಾಯಕ ಎಂದೇ ಪ್ರಧಾನಿ ನರೇಂದ್ರ ಮೋದಿ ಗುರುತಿಸಿಕೊಂಡಿದ್ದರು. ಆದರೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೀಗ ದೇಶದ ಯುವಜನರಿಂದಲೇ ಸವಾಲು ಎದುರಾಗಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


'ಎಕ್ಸ್‌'ನಿಂದ ಇನ್‌ಸ್ಟಾಗೆ ಬದಲಾದ ರಾಜಕೀಯ: ಮೋದಿಗೆ ಕಾದಿದೆ ಜೆನ್‌-ಝೀ ಸವಾಲು!

ಒಂದು ಸಾಲಿನಲ್ಲಿಪ್ರಧಾನಿ ಮೋದಿ ಸರ್ಕಾರಕ್ಕೆ ಜೆನ್-ಝೀ ಯುವಜನತೆಯ ಇನ್‌ಸ್ಟಾಗ್ರಾಮ್ ಆಧಾರಿತ ಹೋರಾಟವು ಹೊಸ ರಾಜಕೀಯ ಸವಾಲನ್ನು ಒಡ್ಡಿದ್ದು, ಭವಿಷ್ಯದ ಚುನಾವಣೆಗಳ ಮೇಲೆ ದೊಡ್ಡ ಪ್ರಭಾವ ಬೀರುವ ಸಂಭವ ಇದೆ.

ಏನು? ಏಕೆ? ಹೇಗೆ?


ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಯಾಕೆ ಸುದ್ದಿಯಲ್ಲಿದೆ?

ನೀಟ್ ಪರೀಕ್ಷಾ ಅಕ್ರಮ ಮತ್ತು ನಿರುದ್ಯೋಗದ ವಿರುದ್ಧ ಯುವ ವಿದ್ಯಾರ್ಥಿಗಳು 'ಕಾಕ್ರೋಚ್' ಹೆಸರಿನಲ್ಲಿ ಆನ್‌ಲೈನ್ ಆಂದೋಲನ ನಡೆಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಡ ಹೇರಿದರು.


ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯದ ಬದಲಾವಣೆ ಹೇಗೆ ಸಂಭವಿಸಿದೆ?

ಹಳೆಯ ರಾಜಕೀಯ ವೇದಿಕೆಯಾದ 'ಎಕ್ಸ್'ಗಿಂತ ಇನ್‌ಸ್ಟಾಗ್ರಾಮ್‌ ಅನ್ನು ಜೆನ್-ಝೀ ಪೀಳಿಗೆ ತಮ್ಮ ಪ್ರತಿಭಟನೆಯ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು, ಇಲ್ಲಿ ಕೃತಕ ಸಂದೇಶಗಳಿಗಿಂತ ನೈಜತೆಗೆ ಹೆಚ್ಚಿನ ಮನ್ನಣೆ ಇದೆ.


ಈ ಯುವ ಚಳವಳಿಯ ಹಿಂದಿರುವ ಪ್ರಮುಖ ಕಾರಣಗಳೇನು?

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಭೀತಿ, ಕೃತಕ ಬುದ್ಧಿಮತ್ತೆಯಿಂದ (AI) ಉದ್ಯೋಗಕ್ಕೆ ಉಂಟಾಗಿರುವ ಅಪಾಯ ಮತ್ತು ಸಂಸತ್ತಿನಲ್ಲಿ ಯುವ ಪ್ರಾತಿನಿಧ್ಯದ ಕೊರತೆಯು ಈ ಆಕ್ರೋಶಕ್ಕೆ ಮೂಲ ಕಾರಣವಾಗಿದೆ.


ಮೋದಿ ಸರ್ಕಾರವು ವಿದ್ಯಾರ್ಥಿಗಳ ಪ್ರತಿಭಟನೆಗೆ ಹೇಗೆ ಸ್ಪಂದಿಸಿದೆ?

ಪ್ರಧಾನಿ ನರೇಂದ್ರ ಮೋದಿ ಇನ್‌ಸ್ಟಾಗ್ರಾಮ್ ಮೂಲಕ ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ ಮತ್ತು ಗೃಹ ಸಚಿವ ರಾಜನಾಥ ಸಿಂಗ್ ಅವರು ವಿದ್ಯಾರ್ಥಿಗಳ ಆತಂಕಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.


ಮುಂದಿನ ಚುನಾವಣೆಗಳ ಮೇಲೆ ಇದರ ಪ್ರಭಾವವೇನು?

ಉತ್ತರ ಪ್ರದೇಶ, ಗುಜರಾತ್ ಹಾಗೂ ಪಂಜಾಬ್‌ನಂತಹ ಪ್ರಮುಖ ರಾಜ್ಯಗಳ ಚುನಾವಣೆಗಳಲ್ಲಿ ಧರ್ಮ-ಜಾತಿಗಿಂತ ಯುವಜನರ ಉದ್ಯೋಗದ ಸಮಸ್ಯೆಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.

ಪ್ರಮುಖ ಅಂಕಿಅಂಶಗಳು

2.2 ಕೋಟಿಸಿಜೆಪಿ ಇನ್‌ಸ್ಟಾಗ್ರಾಮ್ ಅನುಯಾಯಿಗಳ ಸಂಖ್ಯೆಶೇ 10ಲೋಕಸಭೆಯಲ್ಲಿ ಯುವಕರ ಪ್ರಾತಿನಿಧ್ಯಶೇ 40ಭಾರತದ ಜನಸಂಖ್ಯೆಯಲ್ಲಿ ಯುವಕರ ಪಾಲು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಸೇರಿದಂತೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ಯುವ ವಿದ್ಯಾರ್ಥಿಗಳು ಆರಂಭಿಸಿದ್ದ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ದೇಶದಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ಮೋದಿ ಸರ್ಕಾರಕ್ಕೆ ಎದುರಾದ ಅಪರೂಪದ ಹಿನ್ನಡೆಯಾಗಿದೆ. ಮುಂಬರುವ ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಮೇಲೆ ಈ ಬೆಳವಣಿಗೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜೆನ್-ಝೀಗಳನ್ನು ಬೆದರಿಸಲು ಭದ್ರತಾ ಸಿಬ್ಬಂದಿ ಬಳಸಿದ ಅಸ್ತ್ರಗಳಿವು..ದೆಹಲಿಯಲ್ಲಿ ನಡೆಯುತ್ತಿರುವ 'ಕಾಕ್ರೋಚ್' ಹೋರಾಟದ ಬಗ್ಗೆ ತಿಳಿದಿದೆ: ವಿಶ್ವಸಂಸ್ಥೆ

ಇನ್‌ಸ್ಟಾಗ್ರಾಮ್‌ ಜೆನ್‌-ಝೀ ಅಲೆ

ಯಾವುದೇ ಅಧಿಕೃತ ರಾಜಕೀಯ ಪಕ್ಷವಲ್ಲದ ಕಾಕ್ರೋಚ್‌ ಜನತಾ ಪಾರ್ಟಿ ಕೆಲವೇ ಕೆಲವು ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 2.2 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಗಳಿಸಿ ಇತಿಹಾಸ ನಿರ್ಮಿಸಿತ್ತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆನ್‌-ಝೀಗಳನ್ನು 'ಜಿರಳೆ'ಗಳಿಗೆ ಹೋಲಿಸಿದ್ದರಿಂದ ಹುಟ್ಟಿಕೊಂಡಿದ್ದ ಈ ಅಭಿಯಾನವು ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು.

ಬಳಿಕ ಅಮೆರಿಕದಿಂದ ಭಾರತಕ್ಕೆ ಆಗಮಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಯುವಜನರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ನೀಟ್ ಪರೀಕ್ಷಾ ಅಕ್ರಮ ಸೇರಿದಂತೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಯುವಜನರು ನಡೆಸಿದ ತೀವ್ರ ಪ್ರತಿಭಟನೆಗೆ ಮಣಿದಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಿದ್ದರು.

ಯುವಜನರ ಆಕ್ರೋಶಕ್ಕೆ ನಿಜವಾದ ಕಾರಣವೇನು?

ನಿರುದ್ಯೋಗದ ಭೀತಿ:

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯು ಯುವಜನರಲ್ಲಿ ತೀವ್ರ ಆತಂಕ ಮೂಡಿಸಿದೆ.

ಎ.ಐ ಹಾಗೂ ತಂತ್ರಜ್ಞಾನದ ಭೀತಿ:

ಭಾರತವು ಜಾಗತಿಕ ಬ್ಯಾಕ್‌ ಆಫೀಸ್ ಎಂದೇ ಹೆಸರುವಾಸಿಯಾಗಿದೆ. ಆದರೆ, ಕೃತಕ ಬುದ್ಧಿಮತ್ತೆಯ (ಎ.ಐ) ಬೆಳವಣಿಗೆಯಿಂದಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಸೇವಾ ವಲಯದಲ್ಲಿ ಉದ್ಯೋಗ ನಷ್ಟವಾಗಬಹುದು ಎಂಬ ಭಯ ಯುವಜನರಲ್ಲಿದೆ.

ಸಂಸತ್ತಿನಲ್ಲಿ ಯುವ ಪ್ರಾತಿನಿಧ್ಯದ ಕೊರತೆ:

ಭಾರತದ ಜನಸಂಖ್ಯೆಯಲ್ಲಿ 18 ರಿಂದ 40 ವರ್ಷದೊಳಗಿನ ಯುವಕರು ಶೇ 40ರಷ್ಟಿದ್ದಾರೆ. ಆದರೆ, ಲೋಕಸಭೆಯಲ್ಲಿ ಅವರ ಪ್ರಾತಿನಿಧ್ಯ ಶೇ 10ರಷ್ಟಿದೆ. ಪ್ರಸ್ತುತ ಕೇಂದ್ರ ಸಂಪುಟದ ಸರಾಸರಿ ವಯಸ್ಸು 60ಕ್ಕೂ ಹೆಚ್ಚು. ಅಂದರೆ, ಇಂದಿನ ಯುವಕರ ಆಶೋತ್ತರಗಳನ್ನು ಅರ್ಥಮಾಡಿಕೊಳ್ಳಲು ಸರ್ಕಾರ ವಿಫಲವಾಗುತ್ತಿದೆ ಎಂಬ ಭಾವನೆ ಇದೆ.

'ಎಕ್ಸ್‌' ನಿಂದ ಇನ್‌ಸ್ಟಾಗ್ರಾಮ್‌ಗೆ ಬದಲಾದ ರಾಜಕೀಯ

ಇಷ್ಟು ದಿನ ರಾಜಕೀಯ ಚರ್ಚೆಗಳು ಮತ್ತು ಪ್ರಚಾರಗಳು ಹೆಚ್ಚಾಗಿ 'ಎಕ್ಸ್‌' (ಹಳೆಯ ಟ್ವಿಟರ್) ಅಥವಾ ಫೇಸ್‌ಬುಕ್‌ನಲ್ಲಿ ನಡೆಯುತ್ತಿದ್ದವು. ಆದರೆ, ಇಂದಿನ ಜೆನ್‌-ಝೀ ಇನ್‌ಸ್ಟಾಗ್ರಾಮ್ ಅನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಬಿಜೆಪಿ vs ಸಿಜೆಪಿ:

ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ವರ್ಷಗಳ ಪ್ರಯತ್ನದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಗಳಿಸಿದ್ದು 1 ಕೋಟಿ ಫಾಲೋವರ್ಸ್‌ ಮಾತ್ರ. ಆದರೆ, ಸಿಜೆಪಿ ಖಾತೆ ಆರಂಭಿಸಿದ ಕೆಲವೇ ದಿನಗಳಲ್ಲಿ 2.2 ಕೋಟಿ ಫಾಲೋವರ್ಸ್ ಗಳಿಸಿದೆ.

ನೈಜತೆ ಮುಖ್ಯ:

ಇನ್‌ಸ್ಟಾಗ್ರಾಮ್‌ಗೆ ಪ್ರಚಾರದ ವೈಖರಿಗಿಂತ ನೈಜತೆ ಮುಖ್ಯ. ಇಲ್ಲಿ ಪೂರ್ವಯೋಜಿತ, ಕೃತಕ ಸಂದೇಶಗಳು ಕೆಲಸ ಮಾಡುವುದಿಲ್ಲ. ಈ ಮಾಧ್ಯಮ ಸೃಷ್ಟಿಯಾಗಿದ್ದೇ ಈ ಪೀಳಿಗೆಯಿಂದ, ಹೀಗಾಗಿ ಇವರಿಗೆ ಯಾವುದೇ ಹಳೆಯ ರಾಜಕೀಯ ನಾಯಕರ ಬಗ್ಗೆ ಮೂಢನಂಬಿಕೆ ಇಲ್ಲ ಎನ್ನುತ್ತಾರೆ ಅಂಕಣಕಾರ ಸಂತೋಷ್ ದೇಸಾಯಿ.

ಮೋದಿ ಡಿಜಿಟಲ್ ಹೆಜ್ಜೆ, ಮುಂದಿನ ಸವಾಲು

ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್‌ ಹಾಗೂ ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಈ ಯುವಜನರ ಆಕ್ರೋಶ ಬಹುದೊಡ್ಡ ಸವಾಲಾಗುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪರೂಪದ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡು, ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಬಿಜೆಪಿ ಹಿರಿಯ ನಾಯಕ ರಾಜನಾಥ ಸಿಂಗ್ ಕೂಡ ವಿದ್ಯಾರ್ಥಿಗಳ ಆತಂಕಗಳನ್ನು ಆಲಿಸಿ ಪರಿಹರಿಸುವುದೇ ಸರ್ಕಾರದ ಮೊದಲ ಆದ್ಯತೆ ಎಂದಿದ್ದಾರೆ.

ಆದರೆ, ಈ ರಾಜೀನಾಮೆಯು ವಿರೋಧ ಪಕ್ಷಗಳಿಗೆ ಹೊಸ ರಾಜಕೀಯ ಅಸ್ತ್ರವನ್ನು ನೀಡಿದೆ. ಮುಂದಿನ ವರ್ಷ ದೇಶದ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ, ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್ ಹಾಗೂ ಪಂಜಾಬ್‌ಗಳಲ್ಲಿ ಚುನಾವಣೆ ನಡೆಯಲಿದೆ. ಈ ಪೈಕಿ ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಬಿಜೆಪಿಯೇ ಆಡಳಿತದಲ್ಲಿದೆ.

ಇಲ್ಲಿಯವರೆಗೆ ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಮತ ಚಲಾಯಿಸುತ್ತಿದ್ದ ಯುವಕರು, ಈಗ ಉದ್ಯೋಗ ಮತ್ತು ಭವಿಷ್ಯದ ಪ್ರಶ್ನೆಗಳ ಮೇಲೆ ಧ್ವನಿ ಎತ್ತುತ್ತಿರುವುದು ಭಾರತೀಯ ರಾಜಕೀಯದ ಹೊಸ ಬದಲಾವಣೆಗೆ ಮುನ್ನುಡಿ ಬರೆದಿದೆ. 2029ರ ಲೋಕಸಭಾ ಚುನಾವಣೆಯ ವೇಳೆಗೆ ಈ ಯುವ ಆಂದೋಲನವೇನಾದರೂ ಅಧಿಕೃತ ರಾಜಕೀಯ ಪಕ್ಷವಾಗಿ ಬದಲಾದರೆ, ಅದು ಪ್ರಸ್ತುತ ರಾಜಕೀಯ ಸಮೀಕರಣಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಇದೆ.

(ಆಧಾರ: ರಾಯಿಟರ್ಸ್‌)

ನಮ್ಮ ಎಲ್ಲ ಬೇಡಿಕೆಗಳಿಗೆ ಸರ್ಕಾರ ಒಪ್ಪಿದೆ, ಪ್ರತಿಭಟನೆ ಅಂತ್ಯಗೊಂಡಿದೆ: ಸಿಜೆಪಿಮಗನ ಪ್ರಾಮಾಣಿಕತೆ ಗೆದ್ದಿದೆ... ಅಭಿಜಿತ್ ದೀಪ್ಕೆ ಪೋಷಕರ ಸಂಭ್ರಮ
Dailyhunt
Disclaimer: This content has not been generated, created or edited by Dailyhunt. Publisher: Prajavani