Dailyhunt Logo
  • Light mode
    Follow system
    Dark mode
    • Play Story
    • App Story
ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ

ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ

ರಾಕಿಂಗ್‌ ಸ್ಟಾರ್ ಯಶ್‌, ರಾಧಿಕಾ ಪಂಡಿತ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಿನ್ನೆಗೆ (ಡಿಸೆಂಬರ್ 9) 8 ವರ್ಷಗಳು ಕಳೆದಿವೆ. 9ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ನಟಿ ರಾಧಿಕಾ ಪಂಡಿತ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪತಿ ಯಶ್ ಅವರ 10 ಗುಣಗಳ ಬಗ್ಗೆ ಹೊಗಳಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡ ರಾಧಿಕಾ ಪಂಡಿತ್ ಅವರು, ಅದರಲ್ಲಿ 'ನೀವ್ಯಾಕೆ ಪ್ರತಿಯೊಂದಕ್ಕೂ ಗಂಡನನ್ನು ಕರೀತೀರಿ? ಎಂದು ಪ್ರಶ್ನೆ ಹಾಕಿ ಅದಕ್ಕೆ ಅವರೇ ಉತ್ತರಿಸಿದ್ದಾರೆ. ' ನನ್ನ ಚಾಟ್‌ ಜಿಪಿಟಿ, ಅಡುಗೆ ಭಟ್ಟ, ಗುರು, ಕ್ಯಾಲಿಕ್ಯುಲೇಟರ್, ಡಿಜೆ, ಸ್ಟ್ರೆಸ್‌ಬಸ್ಟರ್‌, ಪರ್ಸನಲ್‌ ಡಾಕ್ಟರ್‌, ಫೋಟೋಗ್ರಾಫರ್‌, ನನ್ನ ಶಾಂತಿ' ಎಂದು ಒಂದೊಂದು ಫೋಟೊಗಳ ಕೆಳಗಡೆ ಹೀಗೆ ಬರೆದುಕೊಂಡಿದ್ದಾರೆ.

ಯಶ್ ಟು ವಿಜಯ್: 2026ರಲ್ಲಿ ತೆರೆ ಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿPhoto | ಮಕ್ಕಳ ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿ : ರಾಧಿಕಾ ಪಂಡಿತ್‌

ಯಶ್ ಮತ್ತು ರಾಧಿಕಾ ಪಂಡಿತ್ 2016 ಡಿಸೆಂಬರ್ 9ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್​ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜನಪ್ರಿಯ ದಂಪತಿಗೆ ಐರಾ ಮತ್ತು ಯಥರ್ವ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇನ್ನೂ, 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಯಶ್​ ರಾಧಿಕಾ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ.

Dailyhunt
Disclaimer: This content has not been generated, created or edited by Dailyhunt. Publisher: Prajavani