Dailyhunt Logo
  • Light mode
    Follow system
    Dark mode
    • Play Story
    • App Story
ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯ

ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ್ ದೃಢೀಕರಣ ಕಡ್ಡಾಯ

ವದೆಹಲಿ: ಮನೆಬಳಕೆಯ ಅಡುಗೆ ಅನಿಲ ಸಿಲಿಂಡರ್ ಗ್ರಾಹಕರು ಸಬ್ಸಿಡಿ ಪಡೆಯಬೇಕು ಎಂದಾದರೆ ಅಕ್ಟೋಬರ್ 1ಕ್ಕೂ ಮೊದಲು ಆಧಾರ್ ಸಂಖ್ಯೆಯನ್ನು ಬಳಸಿ ತಮ್ಮ ಗುರುತನ್ನು ದೃಢೀಕರಿಸಬೇಕು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಶನಿವಾರ ತಿಳಿಸಿದೆ.

ಸೆಪ್ಟೆಂಬರ್‌ 19ರವರೆಗಿನ ಅಂಕಿ-ಅಂಶಗಳ ಪ್ರಕಾರ 27.43 ಕೋಟಿ ಗ್ರಾಹಕರು (ಶೇ 89.9ರಷ್ಟು) ಆಧಾರ್ ಸಂಖ್ಯೆ ನಮೂದಿಸಿ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅವರು ಇನ್ನೇನೂ ಮಾಡಬೇಕಾಗಿಲ್ಲ.

ಆದರೆ ಈ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದೆ ಇರುವವರು ತೈಲೋತ್ಪನ್ನಗಳ ಮಾರಾಟ ಕಂಪನಿಗಳ ಮೊಬೈಲ್‌ ಆಯಪ್‌ ಬಳಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅಥವಾ ಎಲ್‌ಪಿಜಿ ಸಿಲಿಂಡರ್‌ ವಿತರಕರಲ್ಲಿಗೆ ತೆರಳಿ ಆ ಕೆಲಸ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani