ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಹೈಸ್ಕೂಲ್ ಆವರಣದಲ್ಲಿ ಭಾನುವಾರ ನಡೆದ ಎಂಪಿಎಲ್ ಟೆನಿಸ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ವಿಜಯಶಾಲಿಯಾದ ಆರ್.ಎಸಿಸಿ ತಂಡಕ್ಕೆ ₹1ಲಕ್ಷ ನಗದು ಹಾಗೂ ಟ್ರೋಫಿಯನ್ನು ಮಹಿಬೂಬ ಮುಲ್ಲಾ ಉದ್ಯಮಿದಾರರು ನೀಡಿದರು.
ದ್ವಿತೀಯ ಸ್ಥಾನ ಪಡೆದ ಮುಲ್ಲಾ ಟೈಗರ್ಸ್ ತಂಡಕ್ಕೆ ₹50 ಸಾವಿರ ನಗದನ್ನು ಹಮೀದ್ ಢವಳಗಿ, ಭಾಷಾ ಮಕಾನದಾರ ನೀಡಿದರು.
ಮುಖಂಡರಾದ ಸಿ.ಬಿ.ಅಸ್ಕಿ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಮಾಜಿ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ,ಸರ್ಕಾರಿ ಆಸ್ಪತ್ರೆ ನಾಮನಿರ್ದೇಶಿತ ಸದಸ್ಯ ರಫೀಕ ಶಿರೋಳ,ಹುಸೇನ್ ಮುಲ್ಲಾ,ಸುಚಿತ್ ಚಳಗೇರಿ,ಅಪ್ತಭ ಮನಿಯಾರ ಸೇರಿದಂತೆ ಅನೇಕರು ಇದ್ದರು.
261104-26-1627787136

