ಬೆಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಭಾಗವಾಗಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಸ್ಡಿಡಿಒ ಪಟ್ಟಿಗೆ ಸೇರಿಸಲಾಗಿರುವ 46.88 ಲಕ್ಷ ಮತದಾರರ ಪೈಕಿ, 27.69 ಲಕ್ಷ ಮತದಾರರು ಬಿಜೆಪಿ ಶಾಸಕರ ಕ್ಷೇತ್ರದವರಾಗಿದ್ದಾರೆ.
ಬೆಂಗಳೂರಿನ 15 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಪ್ರತಿ ಐದು ಎಎಸ್ಡಿಡಿಒ ಮತದಾರರಲ್ಲಿ ಮೂವರು ಬಿಜೆಪಿ ಶಾಸಕರ ಕ್ಷೇತ್ರದವರು.
ಬಿಜೆಪಿ ಶಾಸಕರ ಕ್ಷೇತ್ರಗಳ ಪೈಕಿ ಅತಿಹೆಚ್ಚು ಎಎಸ್ಡಿಡಿಒ ಮತದಾರರು (3.63 ಲಕ್ಷ) ಪಟ್ಟಿಯಾಗಿರುವುದು, ಅತಿ ಹೆಚ್ಚು ಮತದಾರರ ಸಂಖ್ಯೆಯನ್ನು ಹೊಂದಿದ್ದ ಶಾಸಕ ಎಂ.ಕೃಷ್ಣಪ್ಪ ಪ್ರತಿನಿಧಿಸುವ ಬೆಂಗಳೂರು ದಕ್ಷಿಣದಲ್ಲಿ. ಬೆಂಗಳೂರಿನಲ್ಲಿಯೇ ಅತ್ಯಂತ ಕಡಿಮೆ ಎಎಸ್ಡಿಡಿಒ ಮತದಾರರು ಇರುವುದು ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರ ಶಿವಾಜಿನಗರ ಕ್ಷೇತ್ರದಲ್ಲಿ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಮಂಗಳವಾರ ನೀಡಿದ ಪ್ರಕಟಣೆಯ ಪ್ರಕಾರ ರಾಜ್ಯದ 4.46 ಕೋಟಿ ಮತದಾರರ ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಇಷ್ಟೂ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರಲಿದೆ.
ಒಟ್ಟಾರೆಯಾಗಿ ರಾಜ್ಯದಲ್ಲಿ 1.07 ಕೋಟಿ ಮತದಾರರು ಎಎಸ್ಡಿಡಿಒ ಪಟ್ಟಿಯಲ್ಲಿದ್ದಾರೆ. ಈ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಇರುವುದಿಲ್ಲ. ಈ ಮತದಾರರು ಹೊಸದಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಸಂಖ್ಯೆ-6 ಸಲ್ಲಿಸಬೇಕಾಗುತ್ತದೆ.
ಎಸ್.ಸುರೇಶ್ ಕುಮಾರ್, ರಾಜಾಜಿನಗರ ಶಾಸಕಬೆಂಗಳೂರಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಎಸ್ಡಿಡಿಒ ಮತದಾರರು ಇರುವುದರಿಂದಲೇ ಪ್ರತಿ ಚುನಾವಣೆಯಲ್ಲೂ ಮತದಾನದ ಪ್ರಮಾಣ ಅತ್ಯಂತ ಕಡಿಮೆ ದಾಖಲಾಗುತ್ತಿತ್ತು ದಿನೇಶ್ ಗುಂಡೂರಾವ್, ಗಾಂಧಿನಗರ ಶಾಸಕನನ್ನ ಕ್ಷೇತ್ರದಲ್ಲಿ 1.12 ಲಕ್ಷ ಮತದಾರರನ್ನು ಎಎಸ್ಡಿಡಿಒ ಪಟ್ಟಿಗೆ ಸೇರಿಸಿದ್ದಾರೆ. ಈ ಬಗ್ಗೆ ಕಳವಳವಿದೆ. ಏನಾಗುತ್ತದೆಯೋ ಕಾದು ನೋಡಬೇಕು
