Dailyhunt Logo
  • Light mode
    Follow system
    Dark mode
    • Play Story
    • App Story
ಎಸ್‌ಐಆರ್‌ ಪರ ಬಿಜೆಪಿಯಿಂದ ಪ್ರತಿಭಟನೆ ನ. 5ಕ್ಕೆ

ಎಸ್‌ಐಆರ್‌ ಪರ ಬಿಜೆಪಿಯಿಂದ ಪ್ರತಿಭಟನೆ ನ. 5ಕ್ಕೆ

ಶಿವಮೊಗ್ಗ: 'ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ನಡೆಸಿರುವ ಅಪಪ್ರಚಾರದ ವಿರುದ್ಧ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಹೆಸರಿನಲ್ಲಿ ನ. 5ರಂದು ಬೆಳಿಗ್ಗೆ 10ಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ರಾಮಣ್ಣ ಶೆಷ್ಟಿ ಪಾರ್ಕ್‌ನಿಂದ ಅಲ್ಲಮ ಪ್ರಭು ಮೈದಾನದವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ' ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

'ಕಾಂಗ್ರೆಸ್ ಪಕ್ಷಕ್ಕೆ ದೇಶ ಒಟ್ಟಾಗಿರುವುದು ಬೇಡ. ಅದು ಮೊದಲಿನಿಂದಲೂ ದೇಶವನ್ನು ಇಬ್ಭಾಗ ಮಾಡುವ ಕೆಲಸವನ್ನೇ ಮಾಡುತ್ತಿದೆ. ಈಗ ಎಸ್‌ಐಆರ್ ಕುರಿತಂತೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ' ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

'ಈಗಾಗಲೇ ಇಡೀ ದೇಶದಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಪ್ರೇರಣೆ ಆಗಿರುವ ಚುನಾವಣಾ ಪ್ರಕ್ರಿಯೆಯನ್ನೇ ಬುಡ ಮೇಲು ಮಾಡುತ್ತಿದೆ. ಚುನಾವಣಾ ಆಯೋಗಕ್ಕೆ ಗೌರವ ಕೊಡುವ ಬದಲು ಅಪಚಾರ ಮಾಡುತ್ತಿದೆ. ಇದು ನಂಬಿಕೆ ದ್ರೋಹದ ಕೆಲಸ' ಎಂದು ಟೀಕಿಸಿದರು.

'ದೇಶದಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಅತ್ಯುತ್ತಮವಾಗಿ ನಡೆದಿದೆ. ಸತ್ತು ಹೋದವರು, ಊರು ಬಿಟ್ಟು ಹೋದವರನ್ನು ಪಟ್ಟಿಯಿಂದ ತೆಗೆಯಬಾರದೇ? ಎರಡು ಕಡೆ ಮತ ಪಟ್ಟಿಯಲ್ಲಿದ್ದವರನ್ನು ಕೈ ಬಿಡಬಾರದೇ?' ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ ತನ್ನ ಸೋಲು ಒಪ್ಪಿಕೊಳ್ಳುವುದು ಬಿಟ್ಟು ಅಪಪ್ರಚಾರದಲ್ಲಿ ತೊಡಗಿರುವುದು ದುಷ್ಟ ಹುನ್ನಾರವೇ ಸರಿ. ಕಾಂಗ್ರೆಸ್‌ನ ಈ ನಡೆ ಮೆಟ್ಟಿ ನಿಲ್ಲುತ್ತೇವೆ. ಜನರಿಗೆ ಸತ್ಯ ಸಂಗತಿ ತಿಳಿಸುತ್ತೇವೆ' ಎಂದು ತಿಳಿಸಿದರು.

ಪ್ರಮುಖರಾದ ಮೋಹನ್ ರೆಡ್ಡಿ, ದೀನದಯಾಳ್, ನವುಲೆ ಮಂಜುನಾಥ್, ಶ್ರೀನಾಗ್, ಸೋಮೇಶ್ ಪಿ. ಶೇಟ್, ಪ್ರಭಾಕರ್, ಮಹಾಲಕ್ಷ್ಮಿ, ಲತಾ, ಯಶೋಧಾ, ಸುಧಾಮಣಿ, ಪ್ರಕಾಶ್, ಪರಮೇಶ್ ನಾಯ್ಕ, ಲತಾ ಶ್ರೀನಿವಾಸ್, ಸೆಲ್ವಂ, ರಂಗೇಶ್ ಇದ್ದರು.

261103-42-415656789

Dailyhunt
Disclaimer: This content has not been generated, created or edited by Dailyhunt. Publisher: Prajavani