ನವದೆಹಲಿ (ಪಿಟಿಐ): ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಸೆಪ್ಟೆಂಬರ್ ತ್ರೈಮಾಸಿಕದ ನಿವ್ವಳ ಲಾಭವು ಶೇ 14ರಷ್ಟು ಜಾಸ್ತಿ ಆಗಿದ್ದು, ₹23,038 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹20,160 ಕೋಟಿ ಲಾಭ ಗಳಿಸಿತ್ತು.
ಒಟ್ಟು ವರಮಾನವು ₹1.43 ಲಕ್ಷ ಕೋಟಿಗೆ ತಲುಪಿದೆ ಎಂದು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಬ್ಯಾಂಕ್ ತಿಳಿಸಿದೆ.
ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವರಮಾನವು ₹1.34 ಲಕ್ಷ ಕೋಟಿಯಷ್ಟು ಇತ್ತು.
ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬಡ್ಡಿ ವರಮಾನವು ₹1.32 ಲಕ್ಷ ಕೋಟಿ ಆಗಿದೆ. ಬ್ಯಾಂಕ್‌ನ ಒಟ್ಟು ಎನ್‌ಪಿಎ (ವಸೂಲಾಗದ ಸಾಲ) ಪ್ರಮಾಣವು ಶೇ 1.39ಕ್ಕೆ ಇಳಿಕೆ ಕಂಡಿದೆ.
261104-51-796318703

