ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಎಸ್‌ಎಸ್‌ಎಲ್‌ಸಿ: ಹಿಂದಿ ಭಾಷಾ ಅಂಕ ಇನ್ನು ಲೆಕ್ಕಕ್ಕಿಲ್ಲ
ಒಂದು ಸಾಲಿನಲ್ಲಿ2026 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷಾ ವಿಷಯಗಳಾದ ಹಿಂದಿ ಮುಂತಾದವುಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಪ್ರಮುಖ ಅಂಶಗಳು• ಅಂಕಗಳ ಲೆಕ್ಕಾಚಾರದಲ್ಲಿ ಬದಲಾವಣೆಒಟ್ಟು 625 ಅಂಕಗಳಿಗೆ ಪರೀಕ್ಷೆ ನಡೆದರೂ, ಶೇಕಡವಾರು ಫಲಿತಾಂಶ ನಿರ್ಧರಿಸಲು ತೃತೀಯ ಭಾಷೆಯನ್ನು ಹೊರತುಪಡಿಸಿ 525 ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.• ದಾಖಲಾತಿ ವಯೋಮಿತಿ ಸಡಿಲಿಕೆಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಕಡ್ಡಾಯ ನಿಯಮದಲ್ಲಿ 60 ದಿನಗಳ ಸಡಿಲಿಕೆ ನೀಡಲಾಗಿದ್ದು, 5 ವರ್ಷ 10 ತಿಂಗಳು ತುಂಬಿದ ಮಕ್ಕಳನ್ನು ದಾಖಲಿಸಬಹುದು.ಪ್ರಮುಖ ಅಂಕಿಅಂಶಗಳು1.48 ಲಕ್ಷ2025ರಲ್ಲಿ ಹಿಂದಿ ಪಲಿತಾಂಶದಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು625ಒಟ್ಟು ಪರೀಕ್ಷಾ ಅಂಕಗಳು525ಫಲಿತಾಂಶಕ್ಕೆ ಪರಿಗಣಿಸುವ ಅಂಕಗಳು60 ದಿನಗಳುಶಾಲಾ ದಾಖಲಾತಿ ವಯೋಮಿತಿಯಲ್ಲಿ ನೀಡಲಾದ ಸಡಿಲಿಕೆ2026ಹೊಸ ಪದ್ಧತಿ ಜಾರಿಯಾಗುವ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 2026ರ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಮೂರನೇ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿ ಕೈಬಿಟ್ಟು, ಗ್ರೇಡ್ ನಮೂದಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಈ ನಿಯಮ ಅನ್ವಯವಾಗಲಿದೆ. ಹಿಂದಿನ ವರ್ಷಗಳಂತೆ 100 ಅಂಕಗಳಿಗೆ ಪ್ರಶ್ನೆ ಪತ್ರಿಕೆ ಇರುತ್ತದೆ. ಆದರೆ, ಮೌಲ್ಯಮಾಪನದ ನಂತರ ಅಂಕಪಟ್ಟಿಯಲ್ಲಿ ಅಂಕಗಳನ್ನು ನಮೂದಿಸದೆ ಗ್ರೇಡ್ ಎ, ಬಿ, ಸಿ, ಡಿ ಎಂದು ನಮೂದಿಸಲಾಗುತ್ತದೆ ಎಂದರು.
'ಇದುವರೆಗೂ ಮಕ್ಕಳು 625 ಅಂಕಗಳಿಗೆ ಪರೀಕ್ಷೆ ಬರೆಯುತ್ತಿದ್ದರು. ಈಗಲೂ ಅಷ್ಟೆ ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಆದರೆ, ತೃತೀಯ ಭಾಷೆ ಹೊರತುಪಡಿಸಿ ಉಳಿದ ವಿಷಯಗಳ ಗರಿಷ್ಠ 525 ಅಂಕಗಳನ್ನಷ್ಟೇ ಪರಿಗಣಿಸಿ, ಪ್ರತಿ ವಿದ್ಯಾರ್ಥಿಯ ಶೇಕಡವಾರು ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ' ಎಂದು ವಿವರ ನೀಡಿದರು.
ಕನ್ನಡಪರ ಸಂಘಟನೆಗಳ ಬೇಡಿಕೆಯ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಿಂದಿ ಹೇರಿಕೆ ಬಗ್ಗೆ ಆತಂಕ ವ್ಯಕ್ತವಾಗಿದ್ದು, ಹಲವು ವಿದ್ಯಾರ್ಥಿಗಳು ಅನುತ್ತೀರ್ಣ ರಾಗುತ್ತಿದ್ದಾರೆ. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸುಮಾರು 1.48 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. ಮೂರನೇ ಭಾಷಾ ವಿಷಯಗಳ ತರಗತಿಗಳ ಬೋಧನೆಯಲ್ಲಿ ಯಾವ ಬದಲಾವಣೆ ಇರುವುದಿಲ್ಲ ತೃತೀಯ ಭಾಷಾ ವಿಷಯಗಳ ಪರೀಕ್ಷೆ ಮಾರ್ಚ್ 31ರಂದು ನಡೆಯಲಿದೆ ಎಂದರು.
ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ 6 ವರ್ಷ ಕಡ್ಡಾಯ ನಿಯಮವನ್ನು ಬದಲಾವಣೆ ಮಾಡಿದ್ದು, 60 ದಿನಗಳ ಸಡಿಲಿಕೆ ನೀಡಲಾಗಿದೆ. ಈ ಸಡಿಲಿಕೆ ಪ್ರತಿ ವರ್ಷವೂ ಮುಂದುವರಿಯಲಿದೆ. ಇದರಿಂದ 5 ವರ್ಷ 10 ತಿಂಗಳು ಪೂರೈಸಿದ ಮಕ್ಕಳನ್ನೂ 1ನೇ ತರಗತಿಗೆ ದಾಖಲು ಮಾಡಬಹುದು. ರಾಜ್ಯ ಪಠ್ಯಕ್ರಮ ಸೇರಿದಂತೆ ಎಲ್ಲ ಪಠ್ಯಕ್ರಮದ ಶಾಲೆಗಳಿಗೂ ಅನ್ವಯವಾಗಲಿದೆ ಎಂದು ಮಧು ಬಂಗಾರಪ್ಪ ಹೇಳಿದರು.'ಎಲ್ಲ ಪಠ್ಯಕ್ರಮದ ಶಾಲೆಗಳಿಗೂ ಅನ್ವಯ'ಮುಖ್ಯಮಂತ್ರಿಗೆ 'ಕಾಮ್ಸ್' ಪತ್ರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ನೀಡುವ ಶಿಕ್ಷಣ ಇಲಾಖೆಯ ದಿಢೀರ್ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಆಕ್ಷೇಪ ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಪೂರ್ವ ಸಮಾಲೋಚನೆ ನಡೆಸದೆ, ಅಂತಿಮ ಕ್ಷಣದಲ್ಲಿ ಮೂರನೇ ಭಾಷೆಯ ಮಹತ್ವವನ್ನು ತಗ್ಗಿಸುವ ಅಥವಾ ಬದಲಾವಣೆ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಲಕ್ಷಾಂತರ ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಮೂರನೇ ಭಾಷೆಯು ಕೇವಲ ಒಂದು ಪಠ್ಯವಿಷಯವಲ್ಲ, ಅದು ವಿದ್ಯಾರ್ಥಿಗಳ ಬಹುಭಾಷಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಪೂರಕವಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ.
ಮೂರನೇ ಭಾಷೆಯನ್ನು ದುರ್ಬಲಗೊಳಿಸಿದರೆ ಪರೋಕ್ಷವಾಗಿ ಕನ್ನಡ ಭಾಷೆಯ ಪ್ರಾಮುಖ್ಯತೆಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸಂಕಷ್ಟ ದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಇಂತಹ ನಿರ್ಧಾರಗಳಿಂದ ಮುಚ್ಚುವ ಹಂತಕ್ಕೆ ತಲುಪಬಹುದು. ಗ್ರೇಡ್ ಪದ್ಧತಿಯ ಬದಲಿಗೆ, ಕೇಂದ್ರ ಮಂಡಳಿಗಳ ಮಾದರಿಯಲ್ಲಿ ವೈಜ್ಞಾನಿಕವಾಗಿ ಪರೀಕ್ಷಾ ಭಾರವನ್ನು ಕಡಿಮೆ ಮಾಡಬೇಕು. ಶಿಕ್ಷಣ ತಜ್ಞರು ಮತ್ತು ಪಾಲುದಾರರ ಜೊತೆ ಚರ್ಚಿಸಿ ಸಮಗ್ರ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪರಾಮರ್ಶೆಗೆ ಒತ್ತಾಯ: ಹಿಂದಿ ವಿಷಯದಲ್ಲಿ ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡ ಹೊಸ ನಿಯಮವನ್ನು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆ ಮತ್ತು ದೇಶದ ಏಕತೆಯ ದೃಷ್ಟಿಯಿಂದ ಮರು ಪರಿಶೀಲಿಸಬೇಕು ಎಂದು ದೇಶೀಯ ಭಾಷೆಗಳ ಹಿತರಕ್ಷಣಾ ಒಕ್ಕೂಟದ ಉಪಾಧ್ಯಕ್ಷ ಚಿದಾನಂದ ಆ. ಪಾಟೀಲ ಒತ್ತಾಯಿಸಿದ್ದಾರೆ.

