Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ 2026: ಅಮೆರಿಕ, ಮೆಕ್ಸಿಕೊ, ಕೆನಡಾ ಮೈದಾನಗಳ ವೈಶಿಷ್ಟ್ಯವೇನು?

ಫಿಫಾ ವಿಶ್ವಕಪ್ 2026: ಅಮೆರಿಕ, ಮೆಕ್ಸಿಕೊ, ಕೆನಡಾ ಮೈದಾನಗಳ ವೈಶಿಷ್ಟ್ಯವೇನು?

ಜೂನ್ 11ರಿಂದ (ಜೂನ್ 12 ಭಾರತೀಯ ಕಾಲಾಮಾನ) ಫಿಫಾ ವಿಶ್ವಕಪ್-2026 ಆರಂಭವಾಗಲಿದೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರ ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ವಿಶ್ವಕಪ್ ಅನ್ನು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳು ವಹಿಸಿವೆ.

48 ತಂಡಗಳು ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

ಒಟ್ಟು 39 ದಿನಗಳ ಕಾಲ ನಡೆಯುವ ವಿಶ್ವಕಪ್‌ಗೆ 3 ದೇಶಗಳ 16 ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಈ 16 ಕ್ರೀಡಾಂಗಣಗಳ ವಿಶೇಷತೆ ಏನು? ಆಸನಗಳ ಸಾಮರ್ಥ್ಯ ಎಷ್ಟು ಎಂಬುದರ ಮಾಹಿತಿ ತಿಳಿಯೋಣ.

ಅಮೆರಿಕಾದಲ್ಲಿ ಪಂದ್ಯ ನಡೆಯುವ ಕ್ರೀಡಾಂಗಣಗಳು

ಡಲ್ಲಾಸ್ ಕ್ರೀಡಾಂಗಣ

‌ಈ ಕ್ರೀಡಾಂಗಣವು ಈ ಬಾರಿ ವಿಶ್ವಕಪ್ ನಡಯುವ ಅತಿ ದೊಡ್ಡ ಕ್ರೀಡಾಂಗಣವಾಗಿದೆ. ಈ ಕ್ರೀಡಾಂಗಣದಲ್ಲಿ ಮುಚ್ಚಬಹುದಾದ ಮತ್ತು ತೆರೆಯಬಹುದಾದ ಮೇಲ್ಛಾವಣಿ ಇದೆ. ಸೆಮಿಫೈನಲ್ ಸೇರಿದಂತೆ ಟೂರ್ನಿಯ 9 ಪಂದ್ಯಗಳು ಇಲ್ಲಿ ನಡೆಯಲಿದೆ. ಆಸನದ ಸಾಮರ್ಥ್ಯ 94,000.

ಮೆಟ್‌ಲೈಫ್ ಕ್ರೀಡಾಂಗಣ

ಈ ಟೂರ್ನಿಯ ಫೈನಲ್ ಪಂದ್ಯವು ಇದೇ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಈ ಕ್ರೀಡಾಂಗಣವು ಅನೇಕ ಫೈನಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಆಸನ ಸಾಮರ್ಥ್ಯ 82,500 ಇದ್ದು, 8 ಪಂದ್ಯಗಳು ಇಲ್ಲಿ ನಡೆಯಲಿವೆ.

ಅಟ್ಲಾಂಟಾ ಕ್ರೀಡಾಂಗಣ

ಜಾರ್ಜಿಯಾದಲ್ಲಿರುವ ಈ ಕ್ರೀಡಾಂಗಣವು ಸುಧಾರಿತ ತಂತ್ರಜ್ಞಾನ ಮತ್ತು ವಿಶಿಷ್ಟವಾದ ತೆರೆಯುವ, ಮುಚ್ಚುವ ಛಾವಣಿಗೆ ಹೆಸರುವಾಸಿಯಗಿದೆ. ಕ್ರೀಡಾಂಗಣದ ಸುತ್ತಲೂ ಆಧುನಿಕ ಟಿವಿಗಳು ಲಭ್ಯವಿವೆ. ಇದರ ಆಸನ ‌ಸಾಮರ್ಥ್ಯ 75,000. ಆಗಿದ್ದು, ಈ ಮೈದಾನದಲ್ಲಿ 8 ಪಂದ್ಯ ನಡೆಯಲಿದೆ.

ಕಾನ್ಸಾಸ್ ಸಿಟಿ ಕ್ರೀಡಾಂಗಣ

ಓಪನ್ ಪುಟ್‌ಬಾಲ್ ಮೈದಾನವಾಗಿರುವ ಕಾನ್ಸಾಸ್ ಕ್ರೀಡಾಂಗಣವು ಮಿಸೌರಿಯಲ್ಲಿದೆ. ವಿಶ್ವದ ಅತ್ಯಂತ ಶಬ್ಧ ಗದ್ದಲದ ಉಂಟು ಮಾಡುವ ಕ್ರೀಡಾಂಗಣ ಎಂಬ ಗಿನ್ನೆಸ್ ದಾಖಲೆ ಮಾಡಿದೆ. ಇಲ್ಲಿ 6 ಪಂದ್ಯ ನಡೆಯಲಿದ್ದು, ಇದರ ಆಸನ ಸಾಮರ್ಥ್ಯ 73,000 ಆಗಿದೆ.

ಹಾಸ್ಟನ್ ಕ್ರೀಡಾಂಗಣ

ಟೆಕ್ಸಾಸ್‌ನಲ್ಲಿರುವ ಎನ್‌ಆರ್‌ಜಿ ಕ್ರೀಡಾಂಗಣವು ₹3,364 ಕೋಟಿ ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಆಧುನಿಕ ಸೌಲಭ್ಯದಿಂದ ಕೂಡಿರುವ ಈ ಕ್ರೀಡಾಂಗಣದಲ್ಲಿ 7 ಪಂದ್ಯ ನಡೆಯಲಿವೆ. ಇದರ ಆಸನಗಳ ಸಾಮರ್ಥ್ಯ 72,000 ಆಗಿದೆ.

ಲೆವಿಸ್ ಕ್ರೀಡಾಂಗಣ

ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿ ಪ್ರದೇಶದಲ್ಲಿರುವ ಲೆವಿಸ್ ಕ್ರೀಡಾಂಗಣ 6 ಪಂದ್ಯಗಳು ನಡೆಯಲಿದೆ. ಈ ಕ್ರೀಡಾಂಗಣವನ್ನು ಸ್ಮಾರ್ಟ್‌ ಕ್ರೀಡಾಂಗಣವೆಂದು ಕರೆಯಲಾಗುತ್ತದೆ. ಇಲ್ಲಿನ ಆಯಪ್‌ ಮೂಲಕ ಕುಳಿತ ಸ್ಥಳಕ್ಕೆ ಆಹಾರ ಖಾದ್ಯವನ್ನು ಆರ್ಡರ್‌ ಮಾಡಬಹುದು. ಇದು 71,000 ಆಸನದ ಸಾಮರ್ಥ್ಯ ಹೊಂದಿದೆ.

ಲಾಸ್ ಏಂಜಲೀಸ್ ಸ್ಟೇಡಿಯಂ

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಸ್ಟೇಡಿಯಂ ಹೆಚ್ಚು ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಕ್ರೀಡಾಂಗಣದಲ್ಲಿ ಒಂದಾಗಿದೆ. ಇಲ್ಲಿ 8 ಪಂದ್ಯ ನಡೆಯಲಿದ್ದು, ಆಸನ ಸಾಮರ್ಥ್ಯ 70,000 ಆಗಿದೆ.

ಲಿಂಕನ್ ಫೈನಾನ್ಷಿಯಲ್ ಫೀಲ್ಡ್

ಇದೇ ಮೊದಲ ಭಾರಿಗೆ ಪುರುಷರ ಫಿಫಾ ವಿಶ್ವಕಪ್‌ನ ಆತಿಥ್ಯವನ್ನು ಈ ಕ್ರೀಡಾಂಗಣ ವಹಿಸಿದೆ. ಇಲ್ಲಿ 6 ಪಂದ್ಯಗಳು ನಡೆಲಿದ್ದು, 69,000 ಆಸನ ಸಾಮರ್ಥ್ಯವನ್ನು ಹೊಂದಿದೆ.

ಸಿಯಾಟಲ್ ಸ್ಟೇಡಿಯಂ

ವಾಷಿಂಗ್ಟನ್‌ನಲ್ಲಿರುವ ಈ ಕ್ರೀಡಾಂಗಣವು ಆಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಮುಚ್ಚುವ ಮತ್ತು ತೆರೆಯುವ ಮೇಲ್ಛಾವಣಿ ಹೊಂದಿದೆ. ಮಾತ್ರವಲ್ಲ, ಹೆಚ್ಚು ಗದ್ದಲ ಮಾಡುವ ಕ್ರೀಡಾಂಗಣ ಎಂಬ ಗಿನ್ನಿಸ್ ದಾಖಲೆಯೂ ಇದರ ಹೆಸರಿನಲ್ಲಿದೆ. ಇಲ್ಲಿ ಟೂರ್ನಿಯ 6 ಪಂದ್ಯಗಳು ನಡೆಯಲಿದ್ದು, 69,000 ಆಸನ ಸಾಮರ್ಥ್ಯ ಹೊಂದಿದೆ.

ಬೋಸ್ಟನ್ ಸ್ಟೇಡಿಯಂ

ಖಾಸಗಿ ಪುಟ್‌ಬಾಲ್ ಕ್ರೀಡಾಂಗಣವಾಗಿದ್ದು, ಇಲ್ಲಿ ಅಮೆರಿಕಾದ ಅತ್ಯಂತ ಉದ್ದದ ಲೈಟ್‌ಔಸ್‌ ಇದೆ. ಈ ಟೂರ್ನಿಯ ಒಂದು ಕ್ವಾಟರ್‌ ಫೈನಲ್ ಪಂದ್ಯ ಸೇರಿ ಒಟ್ಟು 7 ಪಂದ್ಯ ಇಲ್ಲಿ ನಡೆಯಲಿವೆ. ಇಲ್ಲಿನ ಆಸನ ಸಾಮರ್ಥ್ಯ 65,000 ಆಗಿದೆ.

ಮಿಯಾಮಿ ಸ್ಟೇಡಿಯಂ

ಫ್ಲೋರಿಡಾದ ಈ ಕ್ರೀಡಾಂಗಣವು ಆಕರ್ಷವಾದ ಹಾಗೂ ಉತ್ತಮ ಮೂಲ ಸೌಕಾರ್ಯವುಳ್ಳ ಕ್ರೀಡಾಂಗಣವಾಗಿದೆ. ಇಲ್ಲಿ 7 ಪಂದ್ಯ ನಡೆಯಲಿದ್ದು, ಆಸನ ಸಾಮರ್ಥ್ಯ 65,000 ಇದೆ.

ಮೆಕ್ಸಿಕೊದ ಕ್ರೀಡಾಂಗಣಗಳು

ಮೆಕ್ಸಿಕೊ ಸಿಟಿ ಸ್ಟೇಡಿಯಂ

ಮೆಕ್ಸಿಕೊ ಸಿಟಿಯಲ್ಲಿರುವ ಈ ಕ್ರೀಡಾಂಗಣದಲ್ಲಿ ಈ ಬಾರಿಯ ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸಿದ ಮೊದಲ ಕ್ರೀಡಾಂಗಣವಾಗಿದೆ. ಈ ಬಾರಿ 5 ಪಂದ್ಯಗಳು ಇಲ್ಲಿ ನಡೆಯಲಿವೆ. ಇದರ ಆಸನ ಸಾಮರ್ಥ್ಯ 83,000.

ಮಾಂಟೆರ್ರಿ ಸ್ಟೇಡಿಯಂ ‌

ಪರ್ವತಗಳ ನಡುವೆ ನಿರ್ಮಾಣ ಮಾಡಿರುವ ಮಾಂಟೆರ್ರಿ ಸ್ಟೇಡಿಯಂ ಅನ್ನು ‌ಪರಿಸರ ಸ್ನೇಹಿ ಕ್ರೀಡಾಂಗಣ ಎಂತಲೂ ಕರೆಯುತ್ತಾರೆ. ತೆರೆದ ಕ್ರೀಡಾಂಗಣದಿಂದ ಪರ್ವತಗಳ ಸಾಲನ್ನು ನೋಡಬಹುದು. ಒಟ್ಟು 6 ಪಂದ್ಯಗಳು ಇಲ್ಲಿ ನಡೆಯಲಿದ್ದು, 53,500 ಆಸನ ಸಾಮರ್ಥ್ಯ ಹೊಂದಿದೆ.

ಗ್ವಾಡಾಲಜರಾ ಸ್ಟೇಡಿಯಂ

ಈ ಕ್ರೀಡಾಂಗಣವು ಕೃತಕವಾದ ಬೆಟ್ಟದಂತಹ ಮಾದರಿಯಲ್ಲು ಜ್ವಾಲಾಮುಖಿಯು ಮೇಲೆರುತ್ತಿರುವಂತೆ ಕಾಣುತ್ತದೆ. ಇಲ್ಲಿ ಕೇವಲ 4 ಪಂದ್ಯಗಳು ನಡೆಯಲಿವೆ. ಇದರ ಆಸನ ಸಾಮರ್ಥ್ಯ 48,000 ಆಗಿದೆ.

ಕೆನಡಾದ ಕ್ರೀಡಾಂಗಣಗಳು

ವ್ಯಾಂಕೋವರ್ ಸ್ಟೇಡಿಯಂ

ಕೆನಡಾದ ಬ್ರಿಟಿಷ್ ಕೊಲಂಬಿಯಾದ ಈ ಕ್ರೀಡಾಂಗಣವು 54 ಸಾವಿರ ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ಬಹು-ಉದ್ದೇಶದ ಕ್ರೀಡಾಂಗಣವಾಗಿದೆ. ಕೇಬಲ್ ಆಧಾರಿತ ಮೇಲ್ಛಾವಣಿ ವ್ಯವಸ್ಥೆಯನ್ನು ಈ ಮೈದಾನ ಹೊಂದಿದೆ. ಇಲ್ಲಿ 7 ಪಂದ್ಯಗಳು ನಡೆಯಲಿವೆ.

ಟೊರೊಂಟೊ ಸ್ಟೇಡಿಯಂ

ಕೆನಡಾದ ಪ್ರಮುಖ ಕ್ರೀಡಾಂಗಣವಾಗಿದ್ದು, ಈ ದೇಶದಲ್ಲಿ ಫುಟ್‌ಬಾಲ್‌ ಆಟಕ್ಕಾಗಿಯೇ ನಿರ್ಮಿಸಿದ ಮೊದಲ ಮೈದಾನವಾಗಿದೆ. ಮಾತ್ರವಲ್ಲದೆ ಈ ಬಾರಿಯ ಫಿಫಾ ವಿಶ್ವಕಪ್‌ನ ಆತಿಥ್ಯ ವಹಿಸುವ ಕೆನಾಡವು ದೇಶದಲ್ಲಿ ನಡೆಯುತ್ತಿರುವ ಮೊದಲ ಫಿಫಾ ವಿಶ್ವಕಪ್‌ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಆಸನ ಸಾಮರ್ಥ್ಯ 45,000 ಆಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani