Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ ಆಡಿದ್ದ ಕ್ರಿಕೆಟ್ ದಂತಕಥೆ: ಕಾಲ್ಚಂಡಿನ ಆಟದ ಕೌತುಕತದ ಸಂಗತಿಗಳಿವು

ಫಿಫಾ ವಿಶ್ವಕಪ್ ಆಡಿದ್ದ ಕ್ರಿಕೆಟ್ ದಂತಕಥೆ: ಕಾಲ್ಚಂಡಿನ ಆಟದ ಕೌತುಕತದ ಸಂಗತಿಗಳಿವು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಫಿಫಾ ವಿಶ್ವಕಪ್ ಆಡಿದ್ದ ಕ್ರಿಕೆಟ್ ದಂತಕಥೆ: ಕಾಲ್ಚಂಡಿನ ಆಟದ ಕೌತುಕತದ ಸಂಗತಿಗಳಿವು

ಒಂದು ಸಾಲಿನಲ್ಲಿಫಿಫಾ ವಿಶ್ವಕಪ್‌ನ ರೋಚಕ ಇತಿಹಾಸ, ದಾಖಲೆಯ ಸಾಧನೆಗಳು ಮತ್ತು ಮುಂಬರುವ 2026ರ ಆವೃತ್ತಿಯ ಬಗೆಗಿನ ಕುತೂಹಲಕಾರಿ ಮಾಹಿತಿ ಕಣಜ ಇಲ್ಲಿದೆ.

ಪ್ರಮುಖ ಅಂಶಗಳು• ವಿಶ್ವಕಪ್‌ನ ವಿಶಿಷ್ಟ ದಾಖಲೆಗಳುಸರ್ ವಿವಿ ರಿಚರ್ಡ್ಸ್ ಕ್ರಿಕೆಟ್ ಮತ್ತು ಫುಟ್‌ಬಾಲ್ ವಿಶ್ವಕಪ್ ಎರಡರಲ್ಲೂ ಭಾಗವಹಿಸಿದ ಏಕೈಕ ಆಟಗಾರರಾಗಿದ್ದಾರೆ, ಇನ್ನು ಮೀರೋಸ್ಲಾವ್ ಕ್ಲೋಸ್ 16 ಗೋಲುಗಳೊಂದಿಗೆ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿದ್ದಾರೆ.• ಟ್ರೋಫಿಯ ಹಿಂದಿನ ರೋಚಕ ಕಥೆಗಳು1966ರಲ್ಲಿ ಕಳವಾಗಿದ್ದ ವಿಶ್ವಕಪ್ ಟ್ರೋಫಿಯನ್ನು 'ಪಿಕ್ಕಲ್ಸ್' ಎಂಬ ನಾಯಿ ಪತ್ತೆ ಹಚ್ಚಿತ್ತು, ಅಲ್ಲದೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಇದನ್ನು ಶೂ ಬಾಕ್ಸ್‌ ಒಂದರಲ್ಲಿ ರಹಸ್ಯವಾಗಿ ಬಚ್ಚಿಡಲಾಗಿತ್ತು.• ತಂಡಗಳು ಮತ್ತು ಜನಸಂಖ್ಯೆಬ್ರೆಜಿಲ್ ಮಾತ್ರ ಇದುವರೆಗೆ ನಡೆದ ಎಲ್ಲಾ ವಿಶ್ವಕಪ್‌ಗಳಲ್ಲಿ ಆಡಿದೆ, ಜೊತೆಗೆ ಐಸ್‌ಲ್ಯಾಂಡ್ ಕೇವಲ 3.34 ಲಕ್ಷ ಜನಸಂಖ್ಯೆಯೊಂದಿಗೆ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶವಾಗಿ ಗಮನ ಸೆಳೆದಿದೆ.• ಆಟಗಾರರ ವೈಯಕ್ತಿಕ ದಾಖಲೆಗಳುಪೀಲೆ ಕಿರಿಯ ವಯಸ್ಸಿನಲ್ಲೇ ಗೋಲು ಗಳಿಸಿ ದಾಖಲೆ ನಿರ್ಮಿಸಿದ್ದರೆ, ಈಜಿಪ್ಟ್‌ನ ಎಸ್ಸಾಮ್ ಎಲ್-ಹದರಿ 45ನೇ ವಯಸ್ಸಿನಲ್ಲಿ ಕಣಕ್ಕಿಳಿದು ಅತ್ಯಂತ ಹಿರಿಯ ಆಟಗಾರನೆಂಬ ಖ್ಯಾತಿ ಪಡೆದಿದ್ದಾರೆ.• 2026ರ ವಿಶ್ವಕಪ್ ಮಹತ್ವಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸುತ್ತಿರುವ 2026ರ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ 48 ತಂಡಗಳು ಕಣಕ್ಕಿಳಿಯುತ್ತಿದ್ದು, ಇದು ಇತಿಹಾಸ ನಿರ್ಮಿಸಲಿದೆ.ಪ್ರಮುಖ ಅಂಕಿಅಂಶಗಳು482026ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು16ಮಿರೋಸ್ಲಾವ್ ಕ್ಲೋಸ್ ಅವರ ಒಟ್ಟು ಗೋಲುಗಳು23ಫಿಫಾ ವಿಶ್ವಕಪ್ ಆವೃತ್ತಿಗಳು45ಎಸ್ಸಾಮ್ ಎಲ್-ಹದರಿ ಅವರ ವಯಸ್ಸುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಫುಟ್‌ಬಾಲ್‌ ಮಹಾಹಬ್ಬ ಎಂದೇ ಕರೆಯಲ್ಪಡುವ ಫಿಫಾ ವಿಶ್ವಕಪ್‌ ಟೂರ್ನಿಯ 23ನೇ ಆವೃತ್ತಿಯು ಅಮೆರಿಕ, ಕೆನಡಾ, ಮೆಕ್ಸಿಕೊ ಜಂಟಿ ಆತಿಥ್ಯದಲ್ಲಿ ಇದೇ ಜೂನ್ 11ರಿಂದ ಆರಂಭವಾಗಲಿದ್ದು, ಜುಲೈ 19ರವರೆಗೆ ನಡೆಯಲಿದೆ. ಈಗಾಗಲೇ ಕಾಲ್ಚಂಡಿನ ಆಟದ ಕಾವು ಶುರುವಾಗಿದೆ. ಸುಮಾರು ಒಂದು ಶತಮಾನದಷ್ಟು ಹಳೆಯದಾದ ಈ ಫುಟ್‌ಬಾಲ್ ವಿಶ್ವಕಪ್‌ ಟೂರ್ನಿಯು ಹಲವು ಕೌತುಕದ, ನಾಟಕೀಯ, ವಿಚಿತ್ರ ಹಾಗೂ ಬೆರಗುಗೊಳಿಸುವ ದಾಖಲೆಗಳಿಗೆ ಸಾಕ್ಷಿಯಾಗಿದೆ..

ಫುಟ್‌ಬಾಲ್‌ ಮಹಾ ಹಬ್ಬದ ಕೆಲವು ರೋಚಕ ಸಂಗತಿಗಳು ಇಲ್ಲಿವೆ:

ಫುಟ್‌ಬಾಲ್‌ ಆಡಿದ್ದ ಕ್ರಿಕೆಟ್ ದಂತಕಥೆ: ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕಥೆ ಸರ್ ವಿವಿ ರಿಚರ್ಡ್ಸ್ ಅವರ ಹೆಸರಲ್ಲಿ ಒಂದು ವಿಶಿಷ್ಟ ದಾಖಲೆಯಿದೆ. ಅವರು ಕ್ರಿಕೆಟ್ ವಿಶ್ವಕಪ್ ಮತ್ತು ಫಿಫಾ ವಿಶ್ವಕಪ್ ಎರಡರಲ್ಲೂ ಆಡಿದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ. ವೆಸ್ಟ್‌ ಇಂಡೀಸ್‌ ಪರ ಕ್ರಿಕೆಟ್ ಆಡಿರುವ ಅವರು, ವಿಶ್ವಕಪ್ ಟೂರ್ನಿಯಲ್ಲಿ ಆಂಟಿಗುವಾ ಪರವಾಗಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡಿದ್ದಾರೆ.

ಟ್ರೋಫಿ ಪತ್ತೆ ಮಾಡಿದ 'ಪಿಕ್ಕಲ್ಸ್' ಎನ್ನುವ ನಾಯಿ: ಅದು 1966ರ ವಿಶ್ವಕಪ್ ಸಮಯ. ಇಂಗ್ಲೆಂಡ್‌ನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಹಾಗಾಗಿ ಟೂರ್ನಿಗೂ ಮುಂಚೆ ಅದನ್ನು ವಿವಿಧ ಕಡೆ ಪ್ರದರ್ಶನಕ್ಕೆ ಇಡಲಾಗಿತ್ತು. ಆದರೆ, ಆ ವೇಳೆ ಟೂರ್ನಿಯ ಅಸಲಿ ಟ್ರೋಫಿ(ಜೂಲ್ಸ್ ರಿಮೆಟ್ ಟ್ರೋಫಿ) ಲಂಡನ್‌ನ ಪ್ರದರ್ಶನವೊಂದರಲ್ಲಿ ಕಳ್ಳತನವಾಗಿತ್ತು. ಎಷ್ಟು ಹುಡುಕಾಟ ನಡೆಸಿದರೂ, ಅದು ಪತ್ತೆಯಾಗಲೇ ಇಲ್ಲ. ಹಾಗಾಗಿ ಪೊಲೀಸರು ನಿರಾಶರಾಗಿ ಕುಳಿತಿದ್ದರು. ಈ ವೇಳೆ ಪಿಕ್ಸಲ್ಸ್‌ ಎಂಬ ಕಪ್ಪು-ಬಿಳುಪು ಬಣ್ಣದ ನಾಯಿಯೊಂದು ಹಳೆಯ ದಿನಪತ್ರಿಕೆಯಲ್ಲಿ ಸುತ್ತಿ, ತೋಟವೊಂದರ ಪೊದೆಯಡಿಯಲ್ಲಿ ಬಚ್ಚಿಡಲಾಗಿದ್ದ ಟ್ರೋಫಿಯನ್ನು ಪತ್ತೆ ಮಾಡಿತ್ತು. ಈ ಘಟನೆಯಿಂದ ಪಿಕ್ಸಲ್ಸ್‌, ರಾತ್ರೋರಾತ್ರಿ ರಾಷ್ಟ್ರೀಯ ಹೀರೋ ಆಯಿತು.

ಶೂ ಬಾಕ್ಸ್‌ನಲ್ಲಿ ಅಡಗಿದ್ದ ಟ್ರೋಫಿ: ಅದು ಎರಡನೇ ವಿಶ್ವಯುದ್ಧದ ಸಮಯ. ಅಗ ಫಿಫಾದ ಉಪಾಧ್ಯಕ್ಷರಾಗಿದ್ದ ಒಟ್ಟೊರಿನೊ ಬ್ಯಾರಾಸಿ ಅವರು ವಿಶ್ವಕಪ್ ಟ್ರೋಫಿಯು ಆಕ್ರಮಣಕಾರಿ ಸೈನಿಕರ ಕೈಗೆ ಸಿಗದಂತೆ ರಕ್ಷಿಸಲು, ತಮ್ಮ ಹಾಸಿಗೆಯ ಕೆಳಗಿದ್ದ ಒಂದು ಸಾಧಾರಣ ಶೂ ಬಾಕ್ಸ್‌ನಲ್ಲಿ ಅದನ್ನು ರಹಸ್ಯವಾಗಿ ಬಚ್ಚಿಟ್ಟಿದ್ದರು.

11 ಸೆಕೆಂಡುಗಳ ಗೋಲು: 2002ರ ವಿಶ್ವಕಪ್ ಟೂರ್ನಿಯಲ್ಲಿ ಟರ್ಕಿಯ ಹಕನ್ ಶುಕೂರ್ ಅವರು ದಕ್ಷಿಣ ಕೊರಿಯಾ ವಿರುದ್ಧ, ಪಂದ್ಯ ಆರಂಭವಾದ ಕೇವಲ 11 ಸೆಕೆಂಡುಗಳಲ್ಲಿ ಗೋಲು ಗಳಿಸುವ ಮೂಲಕ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವೇಗದ ಗೋಲು ದಾಖಲಿಸಿದ್ದರು.

ಈ ಆಟಗಾರನಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೇ: ಈಜಿಪ್ಟ್‌ನ ಗೋಲ್‌ಕೀಪರ್ ಎಸ್ಸಾಮ್ ಎಲ್-ಹದರಿ ಅವರು 2018ರ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿದಾಗ ಅವರ ವಯಸ್ಸು 45 ವರ್ಷ 161 ದಿನಗಳು. ಅತಿಯಾದ ದೈಹಿಕ ಸಾಮರ್ಥ್ಯ ಅಗತ್ಯವಿರುವ ಪುಟ್‌ಬಾಲ್‌ನ ಅಂಗಳದಲ್ಲಿ ಕಣಕ್ಕಿಳಿಯುವ ಮೂಲಕ, ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈ ಮೂಲಕ ವಿಶ್ವಕಪ್ ಆಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಗೋಲು ಬಾರಿಸಿದ ಅತಿ ಕಿರಿಯ ಆಟಗಾರ: ಫುಟ್‌ಬಾಲ್ ದಂತಕಥೆ ಪೀಲೆ ಅವರು 1958ರಲ್ಲಿ ತಮ್ಮ ಮೊದಲ ವಿಶ್ವಕಪ್ ಗೋಲು ಗಳಿಸಿದಾಗ ಅವರ ವಯಸ್ಸು ಕೇವಲ 17 ವರ್ಷ 239 ದಿನಗಳು. ಇದುವರೆಗೂ ಫಿಫಾ ವಿಶ್ವಕಪ್‌ನಲ್ಲಿ ಗೋಲು ದಾಖಲಿಸಿದ ಅತಿಕಿರಿಯ ಆಟಗಾರ ಎನ್ನುವ ದಾಖಲೆ ಅವರ ಹೆಸರಿನಲ್ಲಿ ಇದೆ.

ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲುಗಳು: ಜರ್ಮನಿಯ ಮಿರೋಸ್ಲಾವ್ ಕ್ಲೋಸ್ ಅವರು ನಾಲ್ಕು ವಿಶ್ವಕಪ್‌ಗಳನ್ನು ಆಡಿದ್ದು, ಒಟ್ಟು 16 ಗೋಲುಗಳನ್ನು ಗಳಿಸುವ ಮೂಲಕ ಟೂರ್ನಿಯ ಇತಿಹಾಸದಲ್ಲೇ ಸಾರ್ವಕಾಲಿಕ ಅತಿ ಹೆಚ್ಚು ಗೋಲುಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಫಿಫಾ ವಿಶ್ವಕಪ್ ತಪ್ಪಿಸಿಕೊಳ್ಳದ ಏಕೈಕ ದೇಶ: ಪ್ರಮುಖ ಫುಟ್‌ಬಾಲ್ ಆಡುವ ದೇಶಗಳಲ್ಲಿ ಒಂದಾಗಿರುವ ಬ್ರೆಜಿಲ್, ಇದುವರೆಗೂ 5 ಬಾರಿ ಪ್ರಶಸ್ತಿ( ಅತಿ ಹೆಚ್ಚು ಬಾರಿ) ಗೆಲ್ಲುವ ಮೂಲಕ ಫಿಫಾ ವಿಶ್ವಕಪ್ ಸಾಮ್ರಾಟ ಎಂದೇ ಗುರುತಿಸಿಕೊಂಡಿದೆ. ಇದಲ್ಲದೆ, 1930ರಲ್ಲಿ ವಿಶ್ವಕಪ್ ಆರಂಭವಾದಾಗಿನಿಂದ ಇಂದಿನವರೆಗೆ ಎಲ್ಲಾ ಪಂದ್ಯಾವಳಿಗಳಲ್ಲೂ ಆಡಿದ ಏಕೈಕ ದೇಶ ಎನ್ನುವ ಹಿರಿಮೆ ಈ ದೇಶಕ್ಕಿದೆ.

ಬರಿಗಾಲಲ್ಲಿ ವಿಶ್ವಕಪ್‌ ಆಡಲು ತೆರಳಿದ್ದ ಭಾರತ: 1950ರಲ್ಲಿ ಬ್ರೆಜಿಲ್‌ನಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆಯಾಗಿತ್ತು. ಆ ಪಂದ್ಯಾವಳಿಯಲ್ಲಿ ಭಾರತ ತಂಡವು ಬರಿಗಾಲಿನಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ ಕಾರಣ, ಫಿಫಾ ಅನುಮತಿ ನಿರಾಕರಿಸಿತ್ತು ಎನ್ನುವ ವದಂತಿ ಹರಿದಾಡಿತ್ತು. ಆ ವೇಳೆಯಲ್ಲಿ ಭಾರತವು ವಿಶ್ವಕಪ್‌ಗೆ ಹೆಚ್ಚಿನ ಆದ್ಯತೆ ನೀಡಿತ್ತು.

3 ಲಕ್ಷ ಜನಸಂಖ್ಯೆಯ ತಂಡ ವಿಶ್ವಕಪ್ ಆಡಿತ್ತು..!: 3,34,000 ಜನಸಂಖ್ಯೆ ಹೊಂದಿರುವ ಐಸ್‌ಲ್ಯಾಂಡ್ 2018ರಲ್ಲಿ, ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಮೂಲಕ, ಈ ಸಾಧನೆ ಮಾಡಿದ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿದ ದೇಶ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. 1930ರಲ್ಲಿ 15 ಲಕ್ಷ ಜನಸಂಖ್ಯೆ ಹೊಂದಿದ್ದ ಉರುಗ್ವೆ ತಂಡವು ವಿಶ್ವಕಪ್‌ ಗೆಲ್ಲುವ ಮೂಲಕ, ಟ್ರೋಫಿ ಗೆದ್ದಿರುವ ಅತಿ ಕಡಿಮೆ ಜನಸಂಖ್ಯೆ ಹೊಂದಿದ ದೇಶವಾಗಿದೆ.

2026ರಲ್ಲಿ ಕಣಕ್ಕಿಳಿಯಲಿವೆ 48 ತಂಡಗಳು: ಯುಎಸ್, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸುತ್ತಿರುವ 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿಯುತ್ತಿವೆ. ಇದು ವಿಶ್ವಕಪ್ ಇತಿಹಾಸದಲ್ಲೇ ಅತಿಹೆಚ್ಚು ತಂಡಗಳು ಕಣಕ್ಕಿಳಿಯುತ್ತಿರುವ ಟೂರ್ನಿ ಇದಾಗಿದೆ. ಕಳೆದ ಆವೃತ್ತಿಯಲ್ಲಿ 32 ತಂಡಗಳು ಕಣಕ್ಕಿಳಿದಿದ್ದವು.

ಐತಿಹಾಸಿಕ ಕ್ರೀಡಾಂಗಣ: ಮೆಕ್ಸಿಕೋದ 'ಎಸ್ಟಾಡಿಯೊ ಅಜ್ಟೆಕಾ' ಕ್ರೀಡಾಂಗಣವು ಇದುವರೆಗೆ ಮೂರು ಬಾರಿ (1970, 1986 ಮತ್ತು 2026) ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಿದೆ. ಮೂರು ಬೇರೆ ಬೇರೆ ವಿಶ್ವಕಪ್ ಪಂದ್ಯಾವಳಿಗಳಿಗೆ ಆತಿಥ್ಯ ವಹಿಸಿದ ಮೊದಲ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಈ ಮೈದಾನ ಪಾತ್ರವಾಗಿದೆ. ಇದೇ ಮೈದಾನದಲ್ಲಿ ಡಿಯಾಗೋ ಮರಡೋನಾ ತಮ್ಮ ಪ್ರಸಿದ್ಧ 'ಹ್ಯಾಂಡ್ ಆಫ್ ಗಾಡ್' ಗೋಲು ಬಾರಿಸಿದ್ದರು.

ಆಧಾರ: ಬ್ರಿಟಾನಿಕಾ, ಕೇಂಬ್ರಿಡ್ಜ್ ಓಪನ್ ಅಕಾಡೆಮಿ

Dailyhunt
Disclaimer: This content has not been generated, created or edited by Dailyhunt. Publisher: Prajavani