Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ ಫೈನಲ್: ತಾಳ್ಮೆಯಿಂದ ವರ್ತಿಸಿ; ಫುಟ್‌ಬಾಲ್ ಅಭಿಮಾನಿಗಳಿಗೆ ಸಿಎಂ

ಫಿಫಾ ವಿಶ್ವಕಪ್ ಫೈನಲ್: ತಾಳ್ಮೆಯಿಂದ ವರ್ತಿಸಿ; ಫುಟ್‌ಬಾಲ್ ಅಭಿಮಾನಿಗಳಿಗೆ ಸಿಎಂ

ಬೆಂಗಳೂರು: ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸರಿಗೆ ಭಾನುವಾರ ಎಂಬುದು ಇಲ್ಲ. 24 ಗಂಟೆ ಕೆಲಸ ಮಾಡಬೇಕು. ಹಾಗಾಗಿ ಬರಗಾಲಕ್ಕೆ ಸಿದ್ಧತೆ ಕೈಗೊಳ್ಳುವ ಬಗ್ಗೆ ಡಿಸಿ, ಸಿಇಒಗಳೊಂದಿಗೆ ವಿಡಿಯೊ ಸಂವಾದ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಈಗಾಗಲೇ ಪ್ರತಿ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಒಂದು ಕೋಟಿ ರೂ.ಗಳ ಅನುದಾನ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ಎಲ್ಲಾ ಯುವಕರ ಇಚ್ಛೆ ಹಾಗೂ ಮನವಿಯಂತೆ ಇಂದು ನಡೆಯಲಿರುವ ಫಿಫಾ ವಿಶ್ವಕಪ್ ಅಂತಿಮ ಪಂದ್ಯ ವೀಕ್ಷಣೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಬೆಳಗಿನ ಜಾವ 3.30 ರವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನುಮತಿ ನೀಡಲಾಗಿದೆ. ಅಭಿಮಾನಿಗಳು ಫುಟ್ಬಾಲ್ ಅಭಿಮಾನಿಗಳು ಶಾಂತಿಯುತವಾಗಿ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪೊಲೀಸರು ಎಲ್ಲೆಡೆ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಯಾರೇ ಗೆಲ್ಲಲಿ, ಯುವಜನರು ತಾಳ್ಮೆಯನ್ನು ಕಳೆದುಕೊಳ್ಳದೆ ಪುಟ್ಬಾಲ್ ಆಟವನ್ನು ವೀಕ್ಷಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani