Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...

ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಫಿಫಾ ವಿಶ್ವಕಪ್ ಫೈನಲ್‌ಗೆ ಸ್ಪೇನ್: ಒಂದೇ ವಾಕ್ಯದಲ್ಲಿ ಯಮಲ್ ಏನಂದ್ರು ನೋಡಿ...

ಒಂದು ಸಾಲಿನಲ್ಲಿ16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಫೈನಲ್ ಪ್ರವೇಶಿಸಿದ ಸ್ಪೇನ್ ತಂಡ, ಪ್ರಶಸ್ತಿಗಾಗಿ ನ್ಯೂಯಾರ್ಕ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ.

ಪ್ರಮುಖ ಸಂಗತಿಗಳು• 16 ವರ್ಷಗಳ ಬಳಿಕ ಫೈನಲ್ಫಿಫಾ ವಿಶ್ವಕಪ್-2026ರ ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸ್ಪೇನ್ ಅಂತಿಮ ಸುತ್ತಿಗೆ ಪ್ರವೇಶಿಸಿದೆ.• ಯಮಲ್ ಅವರ ಹುಮ್ಮಸ್ಸಿನ ನುಡಿಫೈನಲ್ ಕುರಿತು ಉತ್ತೇಜಿತರಾಗಿರುವ ಯುವ ಆಟಗಾರ ಲ್ಯಾಮಿನ್ ಯಮಲ್, 'ನ್ಯೂಯಾರ್ಕ್, ನಾವು ನಿಮಗಾಗಿ ಬರುತ್ತಿದ್ದೇವೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.• ಪಂದ್ಯದ ಮೇಲಿನ ಸಂಪೂರ್ಣ ಹಿಡಿತಸ್ಪೇನ್ ತಂಡದ ಮಿಡ್‌ಫೀಲ್ಡರ್‌ಗಳು ಪಂದ್ಯದುದ್ದಕ್ಕೂ ಫ್ರಾನ್ಸ್ ಅನ್ನು ನಿಯಂತ್ರಿಸಿದ್ದು, ಮೂರು ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿದರು.• ರಕ್ಷಣಾತ್ಮಕ ಆಟದ ಪ್ರದರ್ಶನಸ್ಪೇನ್ ತಂಡವು ಪಂದ್ಯದಲ್ಲಿ ಒಟ್ಟು 22 ಟ್ಯಾಕಲ್‌ಗಳನ್ನು ಮಾಡಿ ಫ್ರಾನ್ಸ್‌ನ ದಾಳಿಯನ್ನು ಸಮರ್ಥವಾಗಿ ತಡೆಯಿತು, ಫ್ರಾನ್ಸ್ ತಂಡ 14 ಟ್ಯಾಕಲ್‌ಗಳನ್ನು ಮಾತ್ರ ಮಾಡಿತು.• ಯುವ ಮತ್ತು ಹಿರಿಯರ ಒಗ್ಗಟ್ಟುಪೌ ಕುಬಾರ್ಸಿ ಅವರಂತಹ ಯುವ ಪ್ರತಿಭೆಗಳು ಮತ್ತು ಲ್ಯಾಪೋರ್ಟೆ ಅವರಂತಹ ಹಿರಿಯ ಆಟಗಾರರ ಸಮತೋಲಿತ ಹೊಂದಾಣಿಕೆ ಸ್ಪೇನ್ ಗೆಲುವಿಗೆ ಪ್ರಮುಖ ಕಾರಣವಾಗಿದೆ.ಪ್ರಮುಖ ಅಂಕಿಅಂಶಗಳು2-0ಸೆಮಿಫೈನಲ್ ಪಂದ್ಯದ ಅಂಕಗಳ ಅಂತರ22ಸ್ಪೇನ್ ಮಾಡಿದ ಟ್ಯಾಕಲ್‌ಗಳು14ಫ್ರಾನ್ಸ್ ಮಾಡಿದ ಟ್ಯಾಕಲ್‌ಗಳು19ಪೌ ಕುಬಾರ್ಸಿ ವಯಸ್ಸುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಫಿಫಾ ವಿಶ್ವಕಪ್-2026ರ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು 2-0 ಅಂತರದಲ್ಲಿ ಸೋಲಿಸಿದ ಸ್ಪೇನ್ ಪ್ರತಿಷ್ಠಿತ ಟೂರ್ನಿಯಲ್ಲಿ 16 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದೆ. ಈ ನಡುವೆ ಸ್ಪೇನ್ ತಂಡದ ಯುವ ಆಟಗಾರ ಲ್ಯಾಮಿನ್ ಯಮಲ್ ಫೈನಲ್ ಪಂದ್ಯಕ್ಕೆ ತಂಡ ಸಿದ್ದವಾಗಿರುವುದಾಗಿ ಘೋಷಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಸ್ಪೇನ್ ತಂಡ ಸಿದ್ಧವಾಗಿದೆ ಎಂದು ಸೆಮಿಫೈನ್ ಗೆಲುವಿನ ಬಳಿಕ ಯಮಲ್ ತಿಳಿಸಿದ್ದಾರೆ. ಈ ಕುರಿತು ಯಮಲ್ ಅವರು ಒಂದೇ ವಾಕ್ಯದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಸೆಮಿಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿದ ಬಳಿಕ ಯಮಲ್ ಅವರು ಇನ್‌ಸ್ಟಾಗ್ರಾಂ ನಲ್ಲಿ 'ನ್ಯೂವಾಯೋಲ್ ವಾಮೋಸ್ ಪೊರ್ ಟಿ' ಎಂದು ಸ್ಪೇನ್ ಭಾಷೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಂದರೆ 'ನ್ಯೂಯಾರ್ಕ್, ನಾವು ನಿಮಗಾಗಿ ಬರುತ್ತಿದ್ದೇವೆ' ಎಂಬುದಾಗಿದೆ.

ಫಿಫಾ ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಇಂದು (ಬುಧವಾರ) ಮಧ್ಯಾರಾತ್ರಿ 13:30ಕ್ಕೆ ನಡೆಯಲಿದ್ದು, ಇಲ್ಲಿ ಗೆಲ್ಲುವ ತಂಡ ಪ್ರಶಸ್ತಿ ಸುತ್ತಿನಲ್ಲಿ ಸ್ಪೇನ್ ವಿರುದ್ಧ ಸೆಣಸಾಟ ನಡೆಸಲಿದೆ.

ಪಂದ್ಯದಲ್ಲಿ ಸ್ಪೇನ್ ದೇಶದ ಮಿಡ್‌ಫೀಲ್ಡ್ ಆಟಗಾರರು ಫ್ರಾನ್ಸ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಿದರು. ಉಭಯ ತಂಡಗಳು ಚೆಂಡಿನ ಮೇಲೆ ನಿಯಂತ್ರಣ ಹೊಂದಿದ್ದರೂ, ಸ್ಪೇನ್ ಮೂರು ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿತು. ಆದರೆ ಫ್ರಾನ್ಸ್ ಒಂದನ್ನೂ ಸೃಷ್ಟಿಸಲಿಲ್ಲ.

ಸ್ಪೇನ್ ರಕ್ಷಣಾತ್ಮಕವಾಗಿ, 22 ಟ್ಯಾಕಲ್‌ಗಳನ್ನು ಮಾಡಿದರೆ, ಫ್ರಾನ್ಸ್ ಕೇವಲ 14 ಟ್ಯಾಕಲ್‌ಗಳನ್ನಷ್ಟೇ ಮಾಡಲು ಶಕ್ತವಾಯಿತು.

2010ರಲ್ಲಿ ವಿಶ್ವಕಪ್ ಗೆದ್ದ ಸ್ಪೇನ್ ತಂಡದಲ್ಲಿದ್ದ ಸೆರ್ಗಿಯೋ, ಕಾರ್ಲೆಸ್ ಪುಯೋಲ್, ಕ್ಯಾಸಿಲ್ಲಾಸ್ ಅವರಂತಹ ದೈತ್ಯ ತಾರೆಗಳು ಈ ತಂಡದಲ್ಲಿ ಇಲ್ಲದಿರಬಹುದು. ಆದರೆ, ಪ್ರಸ್ತುತ ತಂಡದಲ್ಲಿ ಯುವ ಮತ್ತು ಹಿರಿಯ ಆಟಗಾರರ ಒಗ್ಗಟ್ಟು ಮತ್ತು ಹೊಂದಾಣಿಕೆ ಸೂತ್ರ ತಂಡವನ್ನು ಫೈನಲ್‌ವರೆಗೂ ಕರೆತಂದಿದೆ.

19 ವರ್ಷದ ಯುವ ಆಟಗಾರ ಪೌ ಕುಬಾರ್ಸಿ ಈ ಟೂರ್ನಿಯ ಅತ್ಯುತ್ತಮ ಡಿಫೆಂಡರ್ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ 32 ವರ್ಷದ ಹಿರಿಯ ಆಟಗಾರ ಲ್ಯಾಪೋರ್ಟೆ ಸಾಥ್ ನೀಡಿದ್ದಾರೆ. ಫುಲ್-ಬ್ಯಾಕ್ ಆಟಗಾರರಾದ ಮಾರ್ಕ್ ಕುಕುರೆಲ್ಲಾ ಮತ್ತು ಪೆಟ್ರೊ ಪೊರೊ ಎದುರಾಳಿಗಳಿಗೆ ಸಿಂಹಸ್ವಪ್ನವಾದರು. ಈ ಪಂದ್ಯದಲ್ಲಿ ಪೊರೊ ಅದ್ಭುತ ಗೋಲು ಗಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani