Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್ ಹಿನ್ನೆಲೆಯಲ್ಲಿ ರೊನಾಲ್ಡೊ ಕಟೌಟ್ ಅಳವಡಿಸಿದ ಸುಂಟಿಕೊಪ್ಪ ಯುವ ಪಡೆ

ಫಿಫಾ ವಿಶ್ವಕಪ್ ಹಿನ್ನೆಲೆಯಲ್ಲಿ ರೊನಾಲ್ಡೊ ಕಟೌಟ್ ಅಳವಡಿಸಿದ ಸುಂಟಿಕೊಪ್ಪ ಯುವ ಪಡೆ

ಸುಂಟಿಕೊಪ್ಪ: ಫಿಫಾ ವಿಶ್ವಕಪ್ 2026ರ ಹಿನ್ನೆಲೆಯಲ್ಲಿ ಗದ್ದೆಹಳ್ಳದ ಅಮಿಟಿ ಯುನೈಟೆಡ್ ಫುಟ್ ಬಾಲ್ ಕ್ಲಬ್‌ನ ಯುವ ಪಡೆ ತಮ್ಮ ನೆಚ್ಚಿನ ಪೋರ್ಚುಗಲ್ ತಂಡವನ್ನು ಬೆಂಬಲಿಸಿ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ 40 ಅಡಿ ಎತ್ತರದ ಕಟೌಟ್ ಅಳವಡಿಸಿದೆ. ಈ ಮೂಲಕ ಮತ್ತೊಮ್ಮೆ ಸುಂಟಿಕೊಪ್ಪ ಫುಟ್‌ಬಾಲ್ ತವರೂರು ಎಂದು ಸಾಬೀತುಪಡಿಸಿತು.

ರೀಲ್ಸ್, ಯೂಟ್ಯೂಬ್ ಬ್ಲಾಗರ್, ಪ್ರವಾಸಿಗರು ಕಟೌಟ್‌ ಮುಂದೆ ಫೋಟೊ ತೆಗೆಸಿಕೊಂಡು ಸಂತೋಷ ಪಡುತ್ತಿದ್ದಾರೆ.

ಕೊಡಗಿನ ಫುಟ್‌ಬಾಲ್ ಕಾಶಿ ಎಂದೇ ಕರೆಯುವ ಸುಂಟಿಕೊಪ್ಪದ ರಾಷ್ಟ್ರೀಯ ಹೆದ್ದಾರಿ ಗದ್ದೆಹಳ್ಳದ ವೃತ್ತದಲ್ಲಿ ಬೃಹತ್ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದ್ದು, ಅದರ ಅನಾವರಣ ವೇಳೆ ಪಟಾಕಿ ಸಿಡಿಸಿ ಸಿಹಿ ಹಂಚಿ ಅಮಿಟಿ ತಂಡದ ಯುವ ಪಡೆಗಳು ಸಂಭ್ರಮಿಸಿದರು‌. ಇದೇ ವೇಳೆ ಅಮಿಟಿ ತಂಡದ ಅಧ್ಯಕ್ಷ ರಶೀದ್,ಕಾರ್ಯದರ್ಶಿ -ನೌಫಲ್, ಉಪಾಧ್ಯಕ್ಷ ಸಿದ್ದಿಕ್ ಫಯಾಸ್, ಪದಾಧಿಕಾರಿಗಳಾದ ಕುಟ್ಟಿ, ರಂಶೀದ್, ರಾಶಿ,ರಂಶಾದ್, ರಶೀದ್, ಸೌಕಾತ್, ಝಿಯಾದ್ ಇದ್ದರು‌.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260617-51-1541462967

Dailyhunt
Disclaimer: This content has not been generated, created or edited by Dailyhunt. Publisher: Prajavani